ಕುಂದಗೋಳ : ತಮ್ಮ ಊರಿನಲ್ಲೇ ಕೆಲಸ ಸಿಗದೆ ವಲಸೆ ಕಾರ್ಮಿಕರಾಗಿ ಅಲೆಯುತ್ತಿದ್ದ ಜನಾಂಗಕ್ಕೆ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇನ್ಮುಂದೆ ಗೌಡಗೇರಿ ಗ್ರಾಮದಲ್ಲೇ ಕೆಲಸ ಸಿಗಲಿದೆ.
ಹೌದು ! ಕಳೆದ ಐದು ದಿನಗಳ ಹಿಂದೆಯಷ್ಟೇ ಕುಂದಗೋಳ ತಾಲೂಕು ಗೌಡಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡಾ ಜನತೆ ಉದ್ಯೋಗ ಅರಸಿ ಕುಂದಗೋಳಕ್ಕೆ ಬಂದು ಪುನಃ ಕೆಲಸ ಸಿಗದೆ ಊರಿನತ್ತ ಮರಳಿದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರೇಗಾ ಕೆಲಸ ಸಿಗದಿರುವ ವಿಷಯ ಪ್ರಸ್ತಾಪ ಮಾಡಿತ್ತು.
ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ತಾಲೂಕು ಪಂಚಾಯಿತಿ ನೇರಗಾ ಐಇಸಿ ಕೋ-ಆರ್ಡಿನೇಟರ್ ಗೌಡಗೇರಿ ತಾಂಡಾ ಜನರ ಮನೆ ಮನೆಗೆ ಹೋಗಿ ಗ್ರಾಮ ಪಂಚಾಯಿತಿಗೆ ಕರೆಯಿಸಿ ನರೇಗಾ ಫಾರ್ಮ್ ನಂಬರ್-6 ಭರ್ತಿ ಪಡೆದು ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.
ಈ ವಿಷಯಕ್ಕೆ ನರೇಗಾ ಯೋಜನಾಧಿಕಾರಿ ಅಸ್ತು ಎಂದಿದ್ದಾರೆ.
ಪ್ರಸ್ತುತ ಗೌಡಗೇರಿ ಗ್ರಾಮ ಪಂಚಾಯಿತಿಯಲ್ಲಿ ಶೇ.58% ನರೇಗಾ ಕಾಮಗಾರಿ ಬಾಕಿ ಉಳಿದಿದ್ದು, ಲಮಾಣಿ ತಾಂಡಾ ಜನರಿಗೆ ಜಾಬ್ ಕಾರ್ಡ್ ಮಾಡಿಸಿ ಕೆಲಸ ಮತ್ತು ಕೂಲಿ ನೀಡುವ ಭರವಸೆ ಸಿಕ್ಕಂತಾಗಿದೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/10/2024 05:53 pm