ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈಲ್ವೆ ಅಧಿಕಾರಿಗಳ ವಿರುದ್ಧ ಅಪ್ರೆಂಟಿಸ್ ಅಭ್ಯರ್ಥಿಗಳ ಆಕ್ರೋಶ, ಕನ್ನಡಿಗರಿಗೆ ಇಲ್ಲವೇ ಕರ್ನಾಟಕದಲ್ಲಿ ಆದ್ಯತೆ

ಹುಬ್ಬಳ್ಳಿ: ಕರ್ನಾಟಕದಲ್ಲಿ ಕನ್ನಡಿಗರಿಗೇ ಸಿಗುತ್ತಿಲ್ಲ ಆದ್ಯತೆ. ಕರ್ನಾಟಕದ ಕನ್ನಡಿಗರಿಗೆ ರೈಲ್ವೇ ಇಲಾಖೆಯಿಂದ ತಾರತಮ್ಯ ಮಾಡಲಾಗುತ್ತಿದೆ ಎಂಬುವಂತ ಆರೋಪ ಕೇಳಿ ಬರುತ್ತಿದೆ.‌ ಕರ್ನಾಟಕದಲ್ಲಿ ಕನ್ನಡಿಗರಿಗೇ ಇಲ್ಲವಾ ಆದ್ಯತೆ..? ಎಂಬುವಂತ ಪ್ರಶ್ನೆ ಹುಟ್ಟಿಕೊಂಡಿದೆ.

ಡಿಪ್ಲೋಮ ಹಾಗೂ ಡಿಗ್ರಿ ಆಧಾರದ‌ ಮೇಲೆ ಅಪ್ರೆಂಟಿಸ್ ಮುಗಿಸಿರುವ ಅಭ್ಯರ್ಥಿಗಳಿಗೆ ರೈಲ್ವೇ ಇಲಾಖೆಯಿಂದ ಅನ್ಯಾಯವಾಗಿರುವ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಹೌದು.. ಕಳೆದ 14 ವರ್ಷಗಳಿಂದ ರೈಲ್ವೇ ಇಲಾಖೆಯಲ್ಲಿ ನೌಕರಿ ಕನಸು ಹೊಂದಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆಯಂತೆ. ಕನ್ನಡಿಗರು ಎಂಬ ಕಾರಣಕ್ಕೆ ತಾರತಮ್ಯ ಮಾಡುತ್ತಿರೋ ರೈಲ್ವೇ ಅಧಿಕಾರಿಗಳ ಹಾಗೂ ನೈಋತ್ಯ ರೈಲ್ವೇ ವಲಯದ ಅಧಿಕಾರಿಗಳ ವಿರುದ್ಧ ಅಪ್ರೆಂಟಿಸ್ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ.

ಸುಮಾರು 250 ಕ್ಕೂ ಅಧಿಕ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರಾ ರೈಲ್ವೇ ಅಧಿಕಾರಿಗಳು ಎಂಬುವಂತ ಆರೋಪ ದಟ್ಟವಾಗಿದೆ. ರೈಲ್ವೇ ಇಲಾಖೆಯಿಂದ ಸುತ್ತೋಲೆ‌ ಹೊರಡಿಸಿದ್ದರೂ ಕವಡೆಕಾಸಿನ‌ ಕಿಮ್ಮತ್ತು ನೀಡದ ಅಧಿಕಾರಿಗಳು, ಕಳೆದ 2010 ಹಾಗೂ 2012 ರಲ್ಲೇ ರೈಲ್ವೇ ಇಲಾಖೆಯಿಂದ ಆದೇಶವಾಗಿದೆ. ಇಲಾಖೆಯಿಂದ ಸುತ್ತೋಲೆ ಇದ್ದರೂ ಕ್ಯಾರೆ ಎನ್ನದ ರೈಲ್ವೇ ಮಂಡಳಿ ಅಧಿಕಾರಿಗಳ, ನೈಋತ್ಯ ರೈಲ್ವೇ ಅಧಿಕಾರಿಗಳ ವಿರುದ್ಧ ನೊಂದ ಅಭ್ಯರ್ಥಿಗಳಿಂದ ಗಂಭೀರ ಆರೋಪ ಕೇಳಿ ಬಂದಿದೆ.

ಕಳೆದ 14 ವರ್ಷಗಳಿಂದ ನೌಕರಿ ಕನಸು ಹೊತ್ತು ಕುಳಿತ ಅಭ್ಯರ್ಥಿಗಳಿಗೆ ನಿರಾಸೆ ಹುಟ್ಟಿಸುತ್ತಿರೋ ರೈಲ್ವೇ ಇಲಾಖೆ ಅಧಿಕಾರಿಗಳು, ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು‌ ಮೂಲದ ಅಭ್ಯರ್ಥಿಗಳಿಗೆ ಅನ್ಯಾಯ ಎಸಗುತ್ತಿರೋದಾಗಿ‌ ಆರೋಪಿಸಿದ್ದಾರೆ.‌ ರೈಲ್ವೇ ಇಲಾಖೆಗೆ ಅಲೆದು ಅಲೆದು ಬೇಸತ್ತಿರೋ ಅಭ್ಯರ್ಥಿಗಳು, ತಮ್ಮ ಜೀವನದ ಜೊತೆ ಚೆಲ್ಲಾಟ ಆಡುತ್ತಿರೋ ರೈಲ್ವೇ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವರು, ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡುವ ಕಾರ್ಯವನ್ನು ಮಾಡಬೇಕಿದೆ.

ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/10/2024 02:08 pm

Cinque Terre

89.46 K

Cinque Terre

7

ಸಂಬಂಧಿತ ಸುದ್ದಿ