ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊಸ ವರ್ಷಕ್ಕೆ ಬಾಲ ಬಿಚ್ಚಿದ್ರೆ ಹುಷಾರ್ - 1200ಕ್ಕೂ ಹೆಚ್ಚು ರೌಡಿಗಳಿಗೆ ಕಮಿಷನರ್ ಶಶಿಕುಮಾರ್ ವಾರ್ನಿಂಗ್

ಹುಬ್ಬಳ್ಳಿ: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾಕಿ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವಳಿ ನಗರದಲ್ಲಿನ 1200ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಪರೇಡ್ ಅನ್ನು ಕಾರವಾರ ರಸ್ತೆಯಲ್ಲಿರುವ ಹಳೇ ಸಿ ಆರ್ ಮೈದಾನದಲ್ಲಿ ನಡೆಸಲಾಯಿತು.

ಹುಬ್ಬಳ್ಳಿಯ ಉತ್ತರ ವಿಭಾಗದ, ದಕ್ಷಿಣ ವಿಭಾಗ ಹಾಗೂ ಧಾರವಾಡ ಉಪ ವಿಭಾಗದಿಂದ 1200ಕ್ಕೂ ಹೆಚ್ಚು ರೌಡಿಗಳು ಪರೇಡ್‌ನಲ್ಲಿ ಭಾಗಿಯಾಗಿದ್ದರು. ಕೊಲೆ, ಕೊಲೆ ಯತ್ನ, ಗಲಾಟೆ, ದೊಂಬಿ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ರೌಡಿ ಶೀಟರ್‌ಗಳಿಗೆ ಕಮಿಷನರ್ ಎನ್ ಶಶಿಕುಮಾರ್ ಖಡಕ್ ಎಚ್ಚರಿಕೆಯನ್ನು ನೀಡಿದರು.

1240 ರೌಡಿಗಳಲ್ಲಿ ಕೆಲವೊಂದಿಷ್ಟು ರೌಡಿ ಶೀಟರ್‌ಗಳು ಅಯ್ಯಪ್ಪ ಮಾಲೆಯನ್ನು ಧರಿಸಿದವರು. ಜೇಬ್‌ನಲ್ಲಿ ಅಂಬೇಡ್ಕರ ಚಿತ್ರ ಇರುವ ಪೆನ್ ಇಟ್ಟುಕೊಂಡ ರೌಡಿ ಶೀಟರ್, ವಿಚಿತ್ರ ಬಟ್ಟೆ ಹಾಕಿಕೊಂಡು ಬಂದ ಹಾಗೂ ಗಡ್ಡ ಬಿಟ್ಟ ರೌಡಿಗಳಿಗೆ ಎನ್ ಶಶಿಕುಮಾರ್ ವಾರ್ನಿಂಗ್ ಮಾಡಿದ್ದಾರೆ. ಎಲ್ಲರೂ ಮುಚ್ಚಕೊಂಡ ಶಾಂತಿಯುತವಾಗಿ ಹೊಸ ವರ್ಷ ಆಚರಣೆ ಮಾಡಬೇಕು ಅಂತ ಎಚ್ಚರಿಸಿದ್ದಾರೆ.

ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಅಹಿತಕರ ಘಟನೆಗಳು ಜರುಗದ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಮಾಡಲಿದ್ದಾರೆ. ಒಂದು ವೇಳೆ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯತ್ನಿಸುವರು ಜೈಲಿಗೆ ಹೋಗಲು ರೆಡಿ ಆಗಿರಬೇಕು ಎಂಬ ಸಂದೇಶವನ್ನು ಕಮಿಷನರ್ ಎನ್ ಕಮಿಷನರ್ ರವಾನಿಸಿದ್ದಾರೆ.

-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/12/2024 04:18 pm

Cinque Terre

85.39 K

Cinque Terre

1

ಸಂಬಂಧಿತ ಸುದ್ದಿ