ಹುಬ್ಬಳ್ಳಿ: ಹೌದು,,, ಹಳೇ ಹುಬ್ಬಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯದ ಅವರ ಠಾಣೆಯ ಮಹಿಳಾ ಸಿಬ್ಬಂದಿ ಮೂಖರ್ಜಿ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಅಷ್ಟೇ ಅಲ್ದೆ ಸಾರ್ವಜನಿಕ ಮಹಿಳೆಯೊಬ್ಬರು ತಮ್ಮ ಮಗಳ ಕಿಡ್ನಾಪ್ ಬಗ್ಗೆ ಠಾಣೆಗೆ ದೂರು ಕೊಡಲು ಹೋದ್ರೆ ಆ ಮಹಿಳೆಗೂ ಕೂಡ ಇನ್ಸ್ಪೆಕ್ಟರ್ ಮಂಚಕ್ಕೆ ಕರೆದಿದ್ದನಂತೆ, ಈ ಬಗ್ಗೆ ಆ ಗೌರವಾನ್ವಿತ ಮಹಿಳೆ ತಮಗೆ ಆದ ಅನ್ಯಾಯದ ಬಗ್ಗೆ ಪೊಲೀಸ್ ಕಮಿಷನರ್, ಹೋಮ್ ಮಿನಿಸ್ಟರ್, ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಇದು ಎಲ್ಲ ಮೇಲಾಧಿಕಾರಿಗಳಿಗೆ ಗೊತ್ತಿರುವ ವಿಚಾರ, ತನಿಖೆ ನೆಪದಲ್ಲಿ ಮೇಲಾಧಿಕಾರಿಗಳು ಇನ್ಸ್ಪೆಕ್ಟರ್ ಯಳ್ಳೂರಗೆ ಕ್ಲೀನ್ ಚಿಟ್ ಕೊಟ್ಟಿದ್ದರು. ಕಳೆದ ವಾರ ಹೋಮ್ ಮಿನಿಸ್ಟರ್ ಜಿ. ಪರಮೇಶ್ವರ್ ಅವರು ಹುಬ್ಬಳ್ಳಿಗೆ ಬಂದಾಗ, ಈ ಪ್ರಕರಣದ ಬಗ್ಗೆ ಕೇಳಿದಾಗ ಅದನ್ನು ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಮೇಲೆ ತನಿಖೆ ಮಾಡಿಸಿ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದರು. ಆದ್ರೆ ಇಲ್ಲಿಯವರೆಗೂ ಯಾವ ಕ್ರಮ ಆಗಿಲ್ಲ.
ನೊಂದ ಮಹಿಳಾ ಪೊಲೀಸ್ ಸಿಬ್ಬಂದಿ ತಮಗೆ ಆಗುತ್ತಿರುವ ದೌರ್ಜನ್ಯದ ಮೂಖರ್ಜಿ ಬರೆದ್ರೆ ಅದಕ್ಕೆ ಕಿಮ್ಮತ್ತೇ ಇಲ್ಲದಂತೆ ಮೇಲಾಧಿಕಾರಿಗಳು ಮಾಡಿದ್ರು. ಸಾರ್ವಜನಿಕ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಡಲು ಹೋದ್ರೆ, ಈ ಇನ್ಸ್ಪೆಕ್ಟರ್ ಯಳ್ಳೂರ ಪಾಪ ಮಹಿಳೆಯ ಮೇಲೆನೇ ಕಣ್ಣು ಹಾಕಿದ್ದನಂತೆ. ಈ ಬಗ್ಗೆ ಆ ಮಹಿಳೆ ದೂರು ನೀಡಿದ್ರು ನೋ ಯೂಸ್.... ಇದನ್ನೆಲ್ಲಾ ನೋಡ್ತಿದ್ರೆ ಗೃಹ ಇಲಾಖೆ ಏನ್ ಮಾಡ್ತಿದೆ. ತನಿಖೆ ಅಂತ ನೆಪ ಹೇಳಿ ಕ್ಲೀನ್ ಚಿಟ್ ಕೊಡ್ತಾರೆ ಇದೆಂಥಾ ವ್ಯವಸ್ಥೆ..? ಅಷ್ಟಕ್ಕೂ ಹೋಮ್ ಮಿನಿಸ್ಟರ್ ಇನ್ಸ್ಪೆಕ್ಟರ್ ಯಳ್ಳೂರ ಮೇಲೆ ಬಂದಂತಹ ಆರೋಪದ ಬಗ್ಗೆ ತನಿಖೆ ಮಾಡಿಸಿ ಮಾಹಿತಿ ಪಡೆದ್ರಾ...? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಇನ್ಸ್ಪೆಕ್ಟರ್ ಮೇಲೆ ಒಂದಲ್ಲಾ ಎರಡು ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದ್ರೂ ಮೇಲಾಧಿಕಾರಿಗಳು ಯಾಕೇ ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲಾ..? ಹೀಗೆ ನೂರಾರು ಪ್ರಶ್ನೆಗಳು ಸಾರ್ವಜನಿಕರ ವಲಯದಲ್ಲಿ ಮೂಡುತ್ತಿವೆ. ಸೂಕ್ತ ತನಿಖೆ ಮಾಡಿ ಮಹಿಳೆಯರಿಗೆ ನ್ಯಾಯ ಕೊಡಿಸುತ್ತಾ ಗೃಹ ಇಲಾಖೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/12/2024 05:45 pm