ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶತಮಾನ ಕಂಡ ಧಾರವಾಡದ ಕಾಸ್ಮಸ್ ಕ್ಲಬ್

ಧಾರವಾಡ: ಧಾರವಾಡದಲ್ಲಿ 1924ರಲ್ಲಿ ಹಿರಿಯರಿಂದ ಸ್ಥಾಪನೆಯಾಗಿದ್ದ ಕಾಸ್ಮಸ್ ಕ್ಲಬ್ ಇದೀಗ ಶತಮಾನ ಕಂಡಿದೆ.

ಈ ಕಾಸ್ಮಸ್ ಕ್ಲಬ್‌ನ ಶತಮಾನೋತ್ಸವ ಕಾರ್ಯಕ್ರಮವನ್ನು ಧಾರವಾಡದ ಜೆಎಸ್‌ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಕಾಸ್ಮಸ್ ಕ್ಲಬ್‌ನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಧಾರವಾಡ ಪೂರ್ವಜರು ಭವಿಷ್ಯದ ಚಿಂತನೆ ಮಾಡಿ ಕಾಸ್ಮಸ್ ಕ್ಲಬ್ ಪ್ರಾರಂಭಿಸಿದ್ದರು. ಒಂದು ಊರು ಪೂರ್ಣವಾಗಲು ಕೇವಲ ಅಲ್ಲಿ ಎಲ್ಲ ರೀತಿಯ ಸೌಲಭ್ಯವಿದ್ದರೆ ಸಾಲದು. ಜೊತೆಗೆ ಸರ್ವತೋಮುಖ ಅಭಿವೃದ್ದಿಗೆ ಕ್ರೀಡಾಂಗಣ ಅವಶ್ಯ. ಇದನ್ನು ಅರಿತುಕೊಂಡಿದ್ದ ಪೂರ್ವಜರು 1924ರಲ್ಲಿಯೇ ಕಾಸ್ಮಸ್ ಪ್ರಾರಂಭಿಸಿದ್ದರು ಎಂದರು.

ಯಾವುದೇ ಒಂದು ಸಂಸ್ಥೆ ಪ್ರಾರಂಭಿಸುವುದು ಮುಖ್ಯವಲ್ಲ. ಬದಲಿಗೆ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಮುಖ್ಯ. ಈ ನಿಟ್ಟಿನಲ್ಲಿ ಕಾಸ್ಮಸ್ ಕ್ಲಬ್ ಆಡಳಿತ ಮಂಡಳಿ ಆಯಾ ಕಾಲಕ್ಕೆ ತಕ್ಕಂತೆ ಅಗತ್ಯ ಸೌಲಭ್ಯ ಒದಗಿಸುತ್ತ ಜನರ ಮೆಚ್ಚುಗೆಗೆ ಪಾತ್ರವಾಗಿ ಉತ್ತಮ ರಾಷ್ಟ್ರೀಯ ಕ್ರೀಡಾಪಟುಗಳನ್ನು ನೀಡುತ್ತಿದೆ ಎಂದರು.

ವಕೀಲ ವಿ.ಡಿ.ಕಾಮರೆಡ್ಡಿ, ಕ್ಲಬ್‌ ಅಧ್ಯಕ್ಷ ನಿತಿನ್ ಟಗರಪುರ, ಹಿಂದಿನ ಅಧ್ಯಕ್ಷ ಡಿ.ಎ.ಚಿಪ್ರೆ, ಎ.ಸಿ.ಪುರದ, ಎನ್.ವಿ.ಬಿದರಿಮಠ, ಸಿ.ವಿ.ಮರದ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Edited By : Suman K
Kshetra Samachara

Kshetra Samachara

30/12/2024 06:32 pm

Cinque Terre

77.26 K

Cinque Terre

0

ಸಂಬಂಧಿತ ಸುದ್ದಿ