ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಸ್ತೆಯಲ್ಲಿನ ತಗ್ಗು, ಗುಂಡಿ ಮುಚ್ಚಿ ಮಾನವೀಯತೆ ಮೆರೆದ ಆಟೋ ಚಾಲಕ - ಇವರ ಕಾರ್ಯಕ್ಕೆ ಹ್ಯಾಟ್ಸ್ ಆಫ್‌

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸೂಕ್ತವಾದ ರಸ್ತೆ ಇಲ್ಲದೆ ವಾಹನ ಸವಾರರು ಪರದಾಡುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಆಟೋ ಚಾಲಕ ತಗ್ಗು ಬಿದ್ದಿರುವ ರಸ್ತೆಯನ್ನು ಕಲ್ಲು, ಕಡಿ ಹಾಕಿ ಮುಚ್ಚಿ ಮಾನವೀಯತೆಗೆ ಸಾಕ್ಷಿಯಾಗಿದ್ದಾನೆ. ಈ ಆಟೋ ಚಾಲಕನ ಕಾರ್ಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸೇಮ್ ಎನ್ನಿಸಬೇಕು.

ಹೌದು....ಹುಬ್ಬಳ್ಳಿಯ ಅಶೋಕ ನಗರದ ರಸ್ತೆಯಲ್ಲಿ ತಗ್ಗು ಗುಂಡಿ ಬಿದ್ದಿತ್ತು. ಇದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿತ್ತು. ಇದನ್ನು ಕಂಡ ಆಟೋ ಚಾಲಕ ಅನ್ಸರ ಭಾಷಾ ಎಂಬುವವರು ತಮ್ಮ ಆಟೋದಲ್ಲಿ ಕಲ್ಲು, ಕಡಿ ತುಂಬಿಕೊಂಡು ಬಂದು ಆ ರಸ್ತೆ ತಗ್ಗನ್ನು ಮುಚ್ಚುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅದೆಷ್ಟೋ ಜನಾ ಅದೇ ಗುಂಡಿ ರಸ್ತೆಯಲ್ಲಿ ಓಡಾಡುತ್ತಿದ್ದರು. ಸಾಕಷ್ಟು ಬೈಕ್ ಸವಾರರು ಇಲ್ಲೆ ಬಿದ್ದು ಗಾಯಗೊಂಡಿದ್ದಾರೆ. ಇದನ್ನೆಲ್ಲ ಗಮನಿಸಿದ ಆಟೋ ಚಾಲಕ ಅನ್ಸರ್ ಭಾಷಾ ಅವರು ಸ್ವತಃ ಅವರೇ ಕಲ್ಲು ತಂದು ತಗ್ಗು, ಗುಂಡಿ ಮುಚ್ಚಿದ್ದಾರೆ.

ಅಲ್ಲೆ ಪ್ರಯಾಣ ಮಾಡುವ ಇಬ್ಬರು ಆಟೋ ಚಾಲಕರಿಗೆ ಕೈ ಜೋಡಿಸಿದ್ದಾರೆ. ಆಟೋ ಚಾಲಕನ ಇಂತಹ ಮಹತ್ತರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜನಪ್ರತಿನಿಧಿಗಳೇ, ಅಧಿಕಾರಿಗಳೇ ಈಗಲಾದ್ರು ಕಣ್ತೆರೆದು ನೋಡಿ ಹುಬ್ಬಳ್ಳಿಯಲ್ಲಿ ರಸ್ತೆ ದುರಸ್ತಿ ಮಾಡಿಸಿ.

Edited By : Suman K
Kshetra Samachara

Kshetra Samachara

30/12/2024 05:18 pm

Cinque Terre

24.48 K

Cinque Terre

1

ಸಂಬಂಧಿತ ಸುದ್ದಿ