ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನವೋದ್ಯಮಿಗಳಿಗೆ ದೇಶಪಾಂಡೆ ಸ್ಟಾರ್ಟ್‌ಅಪ್ಸ್ ಅಡಿಪಾಯ: ನಬಾರ್ಡ್ ಅಧ್ಯಕ್ಷರಿಂದ ಅಭಿನಂದನೆ

ಹುಬ್ಬಳ್ಳಿ: ನವೋದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹದ ಜೊತೆಗೆ ಜಾನಪದ ಕೌಶಲಗಳನ್ನು ಬೆಳೆಸುವ ಸದುದ್ದೇಶದಿಂದ ದೇಶಪಾಂಡೆ ಸ್ಟಾರ್ಟ್‌ಅಪ್ಸ್ ಹೊಸ ಮೈಲಿಗಲ್ಲನ್ನು ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ನವೋದ್ಯಮಗಳಿಗೆ ಪ್ರೋತ್ಸಾಹ ನೀಡಿರುವ ದೇಶಪಾಂಡೆ ಸ್ಟಾರ್ಟ್‌ಅಪ್ಸ್ ಈಗ ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಭಾಗದ ಕೌಶಲಗಳ ಅಭಿವೃದ್ಧಿಗೆ ನಬಾರ್ಡ್ ಬ್ಯಾಂಕ್ ಸಹಯೋಗದೊಂದಿಗೆ ಹೊಸ ಚಿಂತನೆ ನಡೆಸುವಲ್ಲಿ ನಿರ್ಧಾರ ಮಾಡಿದೆ.

ಅದೆಷ್ಟೋ ಗ್ರಾಮೀಣ ಭಾಗದ ಕರಕುಶಲ ವಸ್ತುಗಳಿಗೆ ಪೂರಕವಾದ ಮಾರುಕಟ್ಟೆ ಸಿಗದೇ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿವೆ. ಇಂತಹ ಪ್ರೋತ್ಸಾಹ ಸಿಗದ ಉದ್ಯಮಗಳಿಗೆ ಸೂಕ್ತ ಬೆಂಬಲ ನೀಡುವ ಮೂಲಕ ದೇಶಪಾಂಡೆ ಸ್ಟಾರ್ಟ್‌ಅಪ್ಸ್ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದೆ. ಈ ನಿಟ್ಟಿನಲ್ಲಿ ದೇಶಪಾಂಡೆ ಸ್ಟಾರ್ಟ್‌ಅಪ್ಸ್ ವತಿಯಿಂದ ಆಯೋಜಿಸಲಾಗಿದ್ದ ಅಭಿಯಾನ ಇಂತಹ ಕಾರ್ಯಕ್ಕೆ ಸಾಕ್ಷಿಯಾಗಿತು. ನಬಾರ್ಡ್ ಅಧ್ಯಕ್ಷರಾದ ನಬಾರ್ಡ್ ಅಧ್ಯಕ್ಷ ಡಾ.ಜಿ.ಆರ್. ಚಿಂತಾಲಾ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಅಥೆಂಟಿಕ್ ಕರ್ನಾಟಕ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನವೋದ್ಯಮಿಗಳು ತಮ್ಮ ತಮ್ಮ ಬೆಳವಣಿಗೆ ಬಗ್ಗೆ ವಿವರಿಸಿದರು.

ಇನ್ನೂ ಕಾರ್ಯಕ್ರಮದಲ್ಲಿ ಅಪ್ಪಟ ಕರ್ನಾಟಕ ರೂರಲ್ ಮಾರ್ಟ್ ಸ್ಟೋರ್, ಕೊಲ್ಲಾಪುರ ಚಪ್ಪಲಿ ತಯಾರಿಕೆ ಉದ್ಯಮಿಗಳು ಸೇರಿದಂತೆ ಸುಮಾರು ಜನರು ಭಾಗವಹಿಸಿ ತಮ್ಮ ತಮ್ಮ ಕಾರ್ಯವೈಖರಿ ಹಾಗೂ ದೇಶಪಾಂಡೆ ಸ್ಟಾರ್ಟ್‌ಅಪ್ಸ್ ಪ್ರೋತ್ಸಾಹದ ಬಗ್ಗೆ ವಿವರಣೆ ನೀಡಿದರು. ಅಲ್ಲದೇ ಗ್ರಾಮೀಣ ಭಾಗದಲ್ಲಿರುವ ಕರಕುಶಲ ಕಲೆಗಳಿಗೆ ಹಾಗೂ ನವೋದ್ಯಮಿಗಳ ಪ್ರೋತ್ಸಾಹಕ್ಕೆ ನಬಾರ್ಡ್ ವತಿಯಿಂದ ಮೂರು ಅಂಶಗಳ ಕಾರ್ಯಕ್ರಮದ ಹಸ್ತಪ್ರತಿಯನ್ನು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕರಾದ ಗುರುರಾಜ ದೇಶಪಾಂಡೆ ಅವರಿಗೆ ವಿತರಣೆ ಮಾಡಿದ್ದು, ಹೊಸ ಉದ್ಯಮಿಗಳ ಬೆಳವಣಿಗೆಗೆ ಈ ನಿರ್ಧಾರ ಪೂರಕವಾಗಿದೆ.

ಒಟ್ಟಿನಲ್ಲಿ ನವೋದ್ಯಮಿಗಳು ಪ್ರೋತ್ಸಾಹ ಹಾಗೂ ಗ್ರಾಮೀಣ ಭಾಗದ ಉದ್ಯಮಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ದೇಶಪಾಂಡೆ ಸ್ಟಾರ್ಟ್‌ಅಪ್ಸ್ ಕಾರ್ಯಕ್ಕೆ ನಬಾರ್ಡ್ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದ್ದು, ಮಹತ್ವದ ಕಾರ್ಯದ ಮೂಲಕ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/06/2022 08:34 pm

Cinque Terre

73.65 K

Cinque Terre

0

ಸಂಬಂಧಿತ ಸುದ್ದಿ