ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಾಸಕ್ಕೋಂದು ಸೂರು ಕೊಡಿ ಶಾಸಕರೇ ಜಿಲ್ಲಾಧಿಕಾರಿಗಳೇ !

ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ

ಕುಂದಗೋಳ : ಕಳೆದೆರಡು ವರ್ಷಗಳ ಹಿಂದೆ ಅತಿವೃಷ್ಟಿ ಬದುಕಿಗೆ ಸಿಲುಕಿ ಇರುವ ಮನೆಯನ್ನು ಕಳೆದುಕೊಂಡು ಕೃಷಿ ಮಾರುಕಟ್ಟೆ ಉತ್ಪನ್ನ ಮಳಿಗೆಗಳಲ್ಲಿ ಆಶ್ರಯ ಪಡೆದಿದ್ದ, ಸಂಶಿ ಗ್ರಾಮದ ಕುಂಬಾರಗಟ್ಟಿ ನಿವಾಸಿಗಳ ಬದುಕು ಇಂದಿಗೂ ಬಾಡಿಗೆ ಮನೆಗಳಲ್ಲೇ ವಾಸವಾಗಿ ತಮ್ಮ ತಮ್ಮ ಸ್ವಂತ ಮನೆಗಳನ್ನು ಪುನಃ ನಿರ್ಮಿಸಿಕೊಳ್ಳಲಾಗದ ಪರಿಸ್ಥಿತಿಗೆ ಬಂದು ತಲುಪಿದೆ.

ಹೌದು ! ಈ ಹಿಂದೆ ಕುಂಬಾರಗಟ್ಟಿ ಪ್ಲಾಟಿನಲ್ಲಿ ವಾಸವಿದ್ದ, ಎಂಟು ಕುಟುಂಬಗಳು ಅತಿವೃಷ್ಟಿ ಹೊಡೆತಕ್ಕೆ ಸಿಲುಕಿದ ಪರಿಣಾಮ ಮನೆಯ ಗೋಡೆ, ಮಾಳಿಗೆ ಕುಸಿದು ಹಾಳಾಗಿ ಹೋಗಿದ್ದರೂ ಇಂದಿಗೂ ಯಾವುದೇ ಪರಿಹಾರ ಸಿಗದೆ ಎಲ್ಲ ಅಲೆದಾಟ ಮುಗಿಸಿ ಅನಿವಾರ್ಯವಾಗಿ ಚಿಕ್ಕ ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುತ್ತ ತಮ್ಮ ಹಳೇ ಮನೆಗಳಲ್ಲಿ ಮನೆಯ ಸಾಮಗ್ರಿಗಳನ್ನು ನಿರ್ವಹಣೆ ಮಾಡಲಾಗದ ಸ್ಥಿತಿಗೆ ಬಂದು ತಲುಪಿದ್ದಾರೆ.

ಈ ಕುಂಬಾರಗಟ್ಟಿ ಪ್ರದೇಶದ ಸುತ್ತಲೂ ಶೇ.65%ಭಾಗ ನೀರು ತುಂಬಿಕೊಂಡಿದ್ದು, ಇನ್ನುಳಿದ ಜಾಗದಲ್ಲಿ ಮನೆಯಿರುವ ನಿವಾಸಿಗಳು ಅಂಗೈಯಲ್ಲಿ ಜೀವ ಹಿಡಿದು ಮಕ್ಕಳನ್ನು ಹೊರಗೆ ಆಟವಾಡಲು ಬಿಡದಂತಹ ಪರಿಸ್ಥಿತಿ ಒದಗಿ ಕಳೆದ ಎರಡು ವರ್ಷಗಳಿಂದ ನಮಗೊಂದು ಸೂರು ಕಲ್ಪಿಸಿ ಕೊಡಿ ಎಂದು ಸ್ಥಳೀಯ ತಾಲೂಕು ಆಡಳಿತಕ್ಕೆ ಒತ್ತಾಯ ಮಾಡುತ್ತಲಿದ್ರೂ ಇಂದಿಗೂ ನಯಾಪೈಸೆ ಪರಿಹಾರ ಸಿಕ್ಕಿಲ್ಲಾ !

ಈ ಹಿಂದೆ ಕೃಷಿ ಮಾರುಕಟ್ಟೆ ಮಳಿಗೆಗಳಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಿ ಕೊಟ್ಟಿದ್ದ ತಾಲೂಕು ಆಡಳಿತ, ಮರಳಿ ಈಗ ಅದನ್ನು ಕಸಿದುಕೊಂಡಿದ್ದು ಈ ಬಡ ಕುಟುಂಬಗಳು ಕೂಲಿ ನಾಲಿ ಮಾಡುತ್ತಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ

ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಶಾಸಕರು ಜಿಲ್ಲಾಧಿಕಾರಿಗಳು ಗಮನಿಸಿ ನಮಗೆ ಮನೆ ಕೊಡಿ ಎನ್ನುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

15/11/2021 05:15 pm

Cinque Terre

42.76 K

Cinque Terre

6

ಸಂಬಂಧಿತ ಸುದ್ದಿ