ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಧಾರವಾಡ ತಾಲೂಕಿನ ಜೋಗೆಲ್ಲಾಪುರ ಗ್ರಾಮದಲ್ಲಿನ ಚರಂಡಿ ಸಮಸ್ಯೆಯನ್ನು ಸರಿಪಡಿಸಿ ಕೊಡಿ ಎಂದು ಗ್ರಾಮಸ್ಥರು ಒತ್ತಾಯ ಮಾಡುತ್ತ ಬಂದರೂ ಪಾಲಿಕೆ ಕ್ಯಾರೆ ಎಂದಿರಲಿಲ್ಲ.
ಆ ಕೆಲಸ ನಮ್ಮಿಂದ ಆಗೋದಿಲ್ಲ ಎಂದು ಪಾಲಿಕೆಯವರು ಹೇಳಿದ್ರಂತೆ. ಆದ್ರೆ, ಗ್ರಾಮಸ್ಥರೇ ಭಾನುವಾರ ಸ್ವಯಂ ಪ್ರೇರಿತರಾಗಿ ಸಲಾಕೆ, ಗುದ್ದಲಿ ಹಿಡಿದು ಚರಂಡಿ ದುರಸ್ತಿ ಮಾಡಿ ಹಿಡಿದ ಕೆಲಸ ಪೂರ್ತಿ ಮಾಡಿದ್ದಾರೆ.
ಜೋಗೆಲ್ಲಾಪುರ ಗ್ರಾಮ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಗ್ರಾಮ. ಈ ಗ್ರಾಮದಲ್ಲಿ ಸುಮಾರು ತಿಂಗಳುಗಳಿಂದ ಚರಂಡಿ ಸಮಸ್ಯೆ ಇತ್ತು.
ಚರಂಡಿಯಲ್ಲಿ ನೀರು ಸರಿಯಾಗಿ ಹಾದು ಹೋಗದೇ ಹೆಚ್ಚಿನ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿತ್ತು. ಈ ಸಮಸ್ಯೆ ಬಗೆಹರಿಸಿ ಕೊಡಿ ಎಂದು ಪಾಲಿಕೆಗೆ ದುಂಬಾಲು ಬಿದ್ದರೂ ಪಾಲಿಕೆ ಕ್ಯಾರೆ ಎಂದಿರಲಿಲ್ಲ.
ಇಂದು ಗ್ರಾಮಸ್ಥರೇ ತಮ್ಮ ಗ್ರಾಮದಲ್ಲಿನ ಚರಂಡಿ ಸಮಸ್ಯೆಯನ್ನು ಸ್ವಯಂ ಪ್ರೇರಿತರಾಗಿ ನಿಂತು ಕೆಲಸ ಮಾಡುವ ಮೂಲಕ ಬಗೆಹರಿಸಿಕೊಂಡಿದ್ದಾರೆ. ಈ ಸಂಬಂಧ ಬಸವನಗೌಡ ಪಾಟೀಲ ಏನು ಹೇಳಿದ್ದಾರೆ ಕೇಳಿ.
ಸಾರ್ವಜನಿಕರ ಹಿತ ಕಾಪಾಡಬೇಕಾದ ಮಹಾನಗರ ಪಾಲಿಕೆ ಈ ರೀತಿ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರೋದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
Kshetra Samachara
20/09/2020 09:39 pm