ನವಲಗುಂದ : ಇಡೀ ಊರಿಗೆ ಕುಡಿಯುವ ನೀರಿಗೆ ಆಧಾರವಾದ ಕೆರೆಯೊಂದು, ಆ ಗ್ರಾಮದಲ್ಲೇ ಪಂಚಾಯ್ತಿ ಇದ್ರೂ ಅನಾಥವಾಗಿ ಕುಡುಕರ ಅಡ್ಡೆ ಯಾಗಿದ್ದು, ನಿರ್ವಹಣೆ ಕೊರತೆಯಿಂದ ಕಸ ಬೆಳೆದು ಹಾಳಾಗಿದೆ.
ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಜನ ಇಂದಿಗೂ ಕೆರೆ ನೀರನ್ನೇ ಸೇವಿಸುತ್ತಾರೆ. ಮತ್ತು ಕೆರೆ ಕಾಳಜಿಗೂ ಅಷ್ಟೇ ಪ್ರಾಮುಖ್ಯತೆಯನ್ನ ಈ ಹಿಂದಿನಿಂದಲೂ ನೀಡುತ್ತಾ ಬಂದಿದ್ದಿರು, ಇತ್ತಿಚೆಗೆ ಕೆರೆಗೆ ಕುಡುಕರ ಕಾಟ ಹೆಚ್ಚಾದ ಪರಿಣಾಮ ಸಭ್ಯಸ್ಥರು ಕುಡುಕರ ಜೊತೆ ವಾಗ್ವಾದಕ್ಕೆ ಇಳಿಯದೆ ಅವರಿಗೆ ಬುದ್ಧಿ ಹೇಳುವುದನ್ನೇ ಕೈ ಬಿಟ್ಟಿದ್ದಾರೆ. ಈ ಪರಿಣಾಮ ಕೆರೆ ಸುತ್ತ ರಾತ್ರಿಯಾದರೆ ಸಾಕು ಕುಡುಕರ ಜಮಾಯಿಸಿ ಬಿಡ್ತಾರೆ.
ಕೆರೆಗೆ ನೀರಿಗೆ ಬರೋ ಜನರಿಗೆ ತೊಂದರೆ ಉಂಟಾಗಿದ್ದು ಜೊತೆಗೆ ನೀರು ಸಹ ಕಲುಷಿತವಾಗಿದೆ. ಕೆರೆಯ ಸುತ್ತ ಪ್ಲಾಸ್ಟಿಕ್ ತ್ಯಾಜ್ಯ, ಸಾರಾಯಿ ಪಾಕೆಟ್ ಬಿದ್ದಿವೆ. ಈ ಬಗ್ಗೆ ಗಮನಿಸಬೇಕಾದ ಇಬ್ರಾಹಿಂಪುರ ಪಂಚಾಯಿತಿ ಅಧಿಕಾರಿಗಳು ಇಂದಿಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಕಾರಣ ಗ್ರಾಮಸ್ಥರ ಆಕ್ರೋಶ ನೆತ್ತಿಗೇರಿದ್ದು ಕೆರೆಯ ಅಭಿವೃದ್ಧಿಗೆ ಒತ್ತಾಯಿಸಿದ್ದಾರೆ.
Kshetra Samachara
18/11/2020 09:29 pm