ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಣಿ ಚನ್ನಮ್ಮ ಮಠಕ್ಕೆ ಕೊಟ್ಟ ಐತಿಹಾಸಿಕ ಕಂಬಗಳು ಈಗ ಹುಳುಗಳಿಗೆ ಆಹಾರವಾಗಿವೆ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಕರ್ನಾಟಕದ ಐತಿಹಾಸಿಕ ಶರಣ ಪರಂಪರೆ ಮಠಗಳಲ್ಲೊಂದಾಗಿರುವ, ಪ್ರಸಿದ್ಧ ಮೂರು ಸಾವಿರ ಮಠದ ಮುಂಬಾಗದ ಕಂಬಗಳು, ಸಂಪೂರ್ಣ ಶೀತಲಾವ್ಯವಸ್ಥೆ ತಲುಪಿದ್ದು, ಯಾವಾಗಲಾದರೂ ಕುಸಿಯಬಹುದು ಎಂಬ ಆತಂಕ ಭಕ್ತರಲ್ಲಿ ಮನೆ ಮಾಡಿದೆ

ಹೌದು, 800 ವರ್ಷಗಳ ಇತಿಹಾಸ ಹೊಂದಿರುವ ಹುಬ್ಬಳ್ಳಿ ಮೂರುಸಾವಿ ಮಠವು ಲಕ್ಷಾಂತರ ಭಕ್ತರನ್ನು ಹೊಂದಿದೆ. ನಿರ್ವಹಣೆ ಕೊರತೆಯೋ ಅಥವಾ ನಿರ್ಲಕ್ಷ್ಯವೋ ಗೊತ್ತಿಲ್ಲ. ಮಠದ ಮುಂಬಾಗದ ಪ್ರಾಂಗಣಕ್ಕೆ ಅಳವಡಿಸಿರುವ ಕಟ್ಟಿಗೆ ಕಂಬಗಳು, ಗೆದ್ದಿಲು ಹುಳುಗಳ ಆಹಾರವಾಗಿವೆ. ಇನ್ನು ಪ್ರಾಂಗಣಕ್ಕೆ ಒಟ್ಟು 12 ಕಂಬಗಳನ್ನು ಅಳವಡಿಸಿದ್ದು ಮುಂಬಾಗದ 6 ಕಂಬಗಳು, ತಳದ ಒಳಗೆ ಬೋಳು ಬೋಳಾಗಿರುವಂತೆ ಕಾಣುತ್ತಿದೆ. ಸದ್ಯ ಈ ಕಂಬಗಳನ್ನು ಗಮನಿಸಿದರೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು, ಈಗಲೋ ಆಗಲೋ ಕುಸಿದು ಬೀಳುತ್ತವೆ ಎಂಬ ಆತಂಕದಲ್ಲಿವೆ.

ಅಂದಾಜು 32 ಅಡಿ ಎತ್ತರದ ಈ ಕಂಬಗಳು ಮಠದ ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಿವೆ. ಇತ್ತೀಚಿನ ಕೆಲ ವರ್ಷಗಳಿಂದ ಅವುಗಳ ಸಮರ್ಪಕ ನಿರ್ವಹಣೆ ಇಲ್ಲದೆ ಕುಸಿಯುವ ಹಂತಕ್ಕೆ ತಲುಪಿದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ...

ಇನ್ನೂ ಮಠದ ಇತಿಹಾಸ ಹೊಂದಿದ ಗಡಿಯಾರ ಸಹ ನಿರ್ವಹಣೆ ಇಲ್ಲದೇ, ಸಮಯ ತೋರಸಿದೆ ಹಾಗಿ ನಿಂತಿದ್ದು ಮಠದ ಆಡಳಿತ ಮಂಡಳಿ ಏನು ಮಾಡುತ್ತಿದೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡುತ್ತಿದೆ. ಅಷ್ಟೇ ಅಲ್ಲದೆ ಲಕ್ಷಾಂತರ ರೂ ದೇಣಿಗೆ' ರೂಪದಲ್ಲಿ ಸಂಗ್ರಹವಾಗುತ್ತಿದೇ, ಆದ್ರೆ ಮಠದ ಅಭಿವೃದ್ಧಿ ಮಾತ್ರ ಶೂನ್ಯ. ಶೀತಲಗೊಂಡಿರುವ ಕಂಬಗಳನ್ನು ತಕ್ಷಣವೇ ತೆರವುಗೊಳಿಸಿ ಬೇರೆ ವ್ಯವಸ್ಥೆ ಮಾಡಬೇಕು ಎಂದು ಭಕ್ತರು ಮಠದ ಮು.ಜು.ಗು ಸ್ವಾಮಿಗಳಿಗೆ ಈ ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ ಸರಿಪಡಿಸಲು ಮನವಿ ಮಾಡಿದ್ದಾರೆ...

ಒಟ್ಟಿನಲ್ಲಿ ಇತಿಹಾಸ ಪರಂಪರೆ ಹೊಂದಿರುವ ಮೂರು ಸಾವಿರ ಮಠದ ಅವ್ಯವಸ್ಥ' ನೋಡಿದರೆ. ಎಲ್ಲರೂ ಅಚ್ಚರಿ ಪಡುವಂತದ್ದು. ಆದಷ್ಟು ಬೇಗ ಶೀತಲವಾಗಿರುವ ಕಂಬಗಳನ್ನು ಹಾಗೂ ಬಂದ್ ಆಗಿರುವ ಗಡಿಯಾರ ಸರಿ ಪಡಿಸಿ ಮಠದ ಕಳೆಯನ್ನು ಹೆಚ್ಚವಂತೇ ಮಾಡಬೇಕಿದೆ.....!

Edited By : Nagesh Gaonkar
Kshetra Samachara

Kshetra Samachara

25/09/2020 07:21 pm

Cinque Terre

87.41 K

Cinque Terre

7

ಸಂಬಂಧಿತ ಸುದ್ದಿ