ಕುಂದಗೋಳ : ಕೋವಿಡ್ ನಿರ್ವಹಣೆ, ವ್ಯಾಕ್ಸಿನ್ ಪೂರೈಕೆ, ಉತ್ತಮವಾದ ಚಿಕಿತ್ಸೆ, ಔಷಧಿ ಪೂರೈಕೆ, ಸಾರ್ವಜನಿಕರ ಆರೋಗ್ಯ ಜಾಗೃತಿ ಕಾರ್ಯಕ್ರಮದ ಸಾಧನೆ ಜೊತೆಗೆ ವಿಶೇಷವಾಗಿ ಹೆರಿಗೆಗೆ ಹೆಸರಾದ ಆಸ್ಪತ್ರೆಯೊಂದು ಸ್ವಚ್ಛತೆಯಲ್ಲಿ ಎಡವಿದೆ.
ಹೌದು ! ಕುಂದಗೋಳ ತಾಲೂಕು ಆಸ್ಪತ್ರೆ ಗ್ರಾಮೀಣ ಭಾಗದ ಜನರ ಸಂಜೀವಿನಿಯಾಗಿ ಕೋವಿಡ್ ಸಂದರ್ಭದಲ್ಲಿ ಲಸಿಕೆ ನೀಡುವಿಕೆ ಹಾಗೂ ಉತ್ತಮ ಹೆರಿಗೆಗೆ ಹೆಸರುವಾಸಿ ಆದರೇ ಆಸ್ಪತ್ರೆ ಹಿಂಭಾಗ ಹಾಗೂ ಸುತ್ತಮುತ್ತಲು ಬೆಳೆದ ಕಸ ಈ ಸಾಧನೆಯನ್ನು ಮರೆಸುತ್ತಿದೆ.
ತಾಲೂಕು ಆಸ್ಪತ್ರೆಯ ಹಿಂಭಾಗದಲ್ಲಿ ಬಳಸಿ ಬಿಸಾಡಿದ ಪ್ಲಾಸ್ಟಿಕ್, ವೈದ್ಯಕೀಯ ಪರಿಕರಗಳು, ಟೇಬಲ್, ಕುರ್ಚಿ, ಮೇಜು, ಬಕೆಟ್ ಎಲ್ಲೆಂದರಲ್ಲಿ ಬಿದ್ದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಜನ್ಮಸ್ಥಳ ಆಗ್ತಾ ಇವೆ.
ಇನ್ನೂ ಮುಖ್ಯವಾಗಿ ಆಸ್ಪತ್ರೆಯ ಶುದ್ಧ ನೀರಿನ ಘಟಕ ಆಗಾಗ ನೀರಿಲ್ಲದೆ ಬಂದ್ ಆಗುವ ಬಗ್ಗೆ ಪಬ್ಲಿಕ್ ನೆಕ್ಸ್ಟ್'ಗೆ ಜನ ಕರೆ ಮಾಡಿ ಸಮಸ್ಯೆ ವಿವರಿಸುತ್ತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ವೈದ್ಯಾಧಿಕಾರಿ ಗಮನಿಸಿ ನಿಮ್ಮ ಆಸ್ಪತ್ರೆ ಸುತ್ತಲೂ ಏರ್ಪಟ್ಟ ಅನೈರ್ಮಲ್ಯ ಸುಧಾರಿಸಿ ಆಸ್ಪತ್ರೆಯ ನೈಪುಣ್ಯತೆ ಕಾಪಾಡಬೇಕಿದೆ.
Kshetra Samachara
06/06/2022 04:43 pm