ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್...
ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್.. ವರದಿಗೆ ಸ್ಪಂದಿಸಿದ ಪಾಲಿಕೆ ಅಧಿಕಾರಿಗಳು ಬಾಡಿಗೆ ವಾಹನಗಳನ್ನು ಪಾರ್ಕ್ ಮಾಡಲು ಅವಕಾಶ ನೀಡಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆಂದು ಕಾರ್ ಪಾರ್ಕಿಂಗ್ ಮಾಡುತ್ತಿದ್ದ ಬಾಡಿಗೆ ವಾಹನಗಳ ಚಾಲಕರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಖಾಲಿ ಮಾಡಿಸಿದ್ದರು. ಸದ್ಯ ಹಬ್ಬ ಮುಗಿದು 15 ದಿನಗಳು ಕಳೆದಿದ್ದರೂ, ಮತ್ತೆ ವಾಪಸು ಕಾರ್ ಪಾರ್ಕಿಂಗ್‌ಗೆ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ವಾಹನ ಚಾಲಕರು ಎಷ್ಟೊ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಪ್ರಯೋಜನವಾಗಿರಲಿಲ್ಲ. ಸಧ್ಯ ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಕೂಡಲೆ ವಾಹನ ಪಾರ್ಕಿಂಗ್ ಗೆ ಅನುಮತಿ ನೀಡಿದ್ದಾರೆ.
ಇನ್ನು ಮೈದಾನದಲ್ಲಿ ಕಾರ್ ಪಾರ್ಕಿಂಗ್ ಇಲ್ಲದ ಕಾರಣ ಸಕಾಲದಲ್ಲಿ ಬಾಡಿಗೆ ಬಾರದೆ ನೂರಾರು ಚಾಲಕ ಕುಟುಂಬದಲ್ಲಿ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿತ್ತು. ಈ ಕುರಿತು ಪಬ್ಲಿಕ್ ನೆಕ್ಸ್ಟ್ ಕಳೆದ ವಾರ ಸುದ್ದಿಯನ್ನು ಬಿತ್ತರಿಸಿತ್ತು. ಪಬ್ಲಿಕ್ ನೆಕ್ಸ್ಟ್ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕೊನೆಗೂ, ಮೈದಾನ ಮುಖ್ಯ ಗೇಟ್ ಬೀಗ ತೆರೆದು ಕಾರ್ ಪಾರ್ಕಿಂಗ್ ಅವಕಾಶ ನೀಡಿಕೊಟ್ಟಿದ್ದಾರೆ. ಈ ಹಿಂದಿನಂತೆ ಈದ್ಗಾ ಮೈದಾನ ಬಾಡಿಗೆ ಕಾರ್ ಪಾರ್ಕಿಂಗ್ ಆರಂಭಗೊಂಡಿದ್ದು, ಬಾಡಿಗೆ ಸವಾರರ ಮುಖದಲ್ಲಿ ಸಂತಸ ಮೂಡಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
21/09/2022 03:37 pm