ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಕೀಲ್ ಅಹ್ಮದ್ ಸಾಹೇಬ್ರ್ ಸ್ವಲ್ಪ ಕಣ್ಣು ತಗದ್ ನೋಡ್ರೀ..!

ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಕೆಲಸದಿಂದ ನಮ್ಮ ಹುಬ್ಬಳ್ಳಿ ಏನ್ ಚಂದ ಆಗುದಿಲ್ಲ...ಆದ್ರ್ ಕಾಂಟ್ರಾಕ್ಟ್ರ್ ಮತ್ತ ಅವಾ ಮಾಡಿದ್ ಅಂದಾ ದುಂದಿ ಕೆಲಸಾ ನೋಡಿ ಸುಮ್ಮನ್ ಕುಂಡ್ರೂ....ಕಳ್ಳ ಕುರುಡು ಸರಕಾರಿ ಅಧಿಕಾರಿಗಳ...ಮಾತ್ರ್ ಗಿಚ್ಚ್ ಅಭಿವೃದ್ಧಿ ಕಾಣತ್ತಾರ್...ರೀ!

ಮನ್ನೇರೆ ಇಲ್ಲಿ ನೀರ್ ನಿಂದ್ರಾಕ್ ನೆಟ್ಟಗ್ ಜಗಾ ಮಾಡಿದಿಲ್ಲ... ಈಗ್ ನೋಡ್ರೀ.... ಇಲ್ಲಿ ಗಟರ್ ಮ್ಯಾಗ್ ಮಸ್ತ್ ಫೆವರ್ಸ್ ಹೊಂದಸ್ಯಾರ್... ಆದ್ರ್ ಗಟರನ್ಯಾಗಿನ ಕಸಾ ತಗ್ಯಾಕ್ ಗಟರಗೇ ಬಾಯ ಬಿಟ್ಟಿಲ್ಲ....ಕಣ್ಣಾಗ ಮಣ್ಣ ಹಾಕೊಂಡ ಅವರ ಕೆಲಸಾ ಮಾಡತ್ತಾರ್ ಶಕೀಲ್ ಅಹ್ಮದ್ ಸಾಹೇಬ್ರ್ ಟೀಮ್ ನವರ್ ಅಲ್ಲೇ ಎಸಿ ರೂಮ್ ನ್ಯಾಗ್ ಕುಂತ್ ಪರಿಶೀಲನೆ ಮಾಡತ್ತಾರ್...ವ್ಹಾ..ರೇ....ವ್ಹಾ....

ಹ...ಸ್ವಲ್ಪ ತಡಿರಿ.... ಇನ್ನೊಬ್ಬರನ ಬಿಟ್ಟ ಬಿಟ್ಟವಿ... ಈ ವಾರ್ಡಿನ್ ಕಾರ್ಪೊರೇಟರ್ ಶ್ರೀಮತಿ‌ ಬುರಬುರೇ ಅವರ್ ಅಂತು ಒಂದ್ ಸಾರಿನು ಇತ್ತಾಗ ಹಾದಿಲ್ಲ.. ಇಂತಾ ಹಾಳ ಕೆಲಸಾ ಮಾಡಾಕ್ ಕುಂತ್ರು ಈಕಡೆ ತಿರುಗಿ ನೋಡೊರಿಲ್ಲ..

ಹಿಂಗ್ ಆದ್ರ್ ಪಾಪ ಆ ಮೋದಿಜೀ ಕಂಡ್ ಸ್ಮಾರ್ಟ್ ಸಿಟಿ ಕನಸ ಸುದ್ದ ಆದಂಗ್. ನಿಮ್ಮ ಎರಿಯಾನ್ಯಾಗು ಸ್ಮಾರ್ಟ್ ಸಿಟಿ ಏನರೇ ಯಡವಟ್ಟು ಕೆಲಸಾಮಾಡಿದ್ರ್. ನಿಮ್ಮ ಪಬ್ಲಿಕ್ ನೆಕ್ಸ್ಟ್ ಗೆ ಕರೆಮಾಡ್ರಿ....7349619443

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By :
Kshetra Samachara

Kshetra Samachara

06/09/2022 02:06 pm

Cinque Terre

34.88 K

Cinque Terre

8

ಸಂಬಂಧಿತ ಸುದ್ದಿ