ಹುಬ್ಬಳ್ಳಿ: ರಸ್ತೆಗಳ ತುಂಬೆಲ್ಲಾ ಗುಂಡಿಗಳದ್ದೇ ಕಾರುಬಾರು, ಈ ರಸ್ತೆಯಲ್ಲಿ ಪ್ರಯಾಣಿಕರ ಓಡಾಟ ದಿನನಿತ್ಯದ ಗೋಳು ಕೇಳೋರ್ಯಾರು? ಎಂಬ ಶೀರ್ಷಿಕೆಯಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿಯೊಂದನ್ನು ಬಿತ್ತರಿಸಿತ್ತು.
ಸದ್ಯ ನಮ್ಮ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆಯ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಗೆ ಈ ಮಾರ್ಗ ಸಂಪರ್ಕಿಸುತ್ತದೆ.
ಹೌದು ಕವಿ ಕುಮಾರವ್ಯಾಸರ ಜನ್ಮಸ್ಥಳವಾದ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮಕ್ಕೆ ಹೋಗಬೇಕಾದರೆ ಗದಗ ಹುಬ್ಬಳ್ಳಿಯಿಂದ ಇದೇ ಮಾರ್ಗವಾಗಿ ಚಲಿಸಬೇಕಾಗಿದೆ.
ಹೊಸ ರಸ್ತೆ ನಿರ್ಮಾಣವಾಗುತ್ತಿದ್ದು, ಎಷ್ಟರ ಮಟ್ಟಿಗೆ ಈ ರಸ್ತೆ ಗುಣಮಟ್ಟ ಇರುತ್ತದೆಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಪಬ್ಲಿಕ್ ನೆಕ್ಸ್ಟ್ ಮನವಿಗೆ ಸ್ಪಂದಿಸಿ ಕಾಮಗಾರಿ ಆರಂಭವಾಗಿರುವುದಕ್ಕೆ ಜನ ಪಬ್ಲಿಕ್ ನೆಕ್ಸ್ಟ್ ಗೆ ಧನ್ಯವಾದ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/08/2022 10:50 am