ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಫಲಾನುಭವಿಗಳಿಗೆ ಸರ್ಕಾರದಿಂದ ಸಿಕ್ಕಿಲ್ಲ ಯೋಜನೆ ಹಣ: ಬಡ್ಡಿ ಸಾಲ ಕಟ್ಟಿ, ಕಟ್ಟಿ ಸುಸ್ತಾದ ಜನ

ಕುಂದಗೋಳ: ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿಯ ಯೋಜನೆಯಡಿ ಆಯ್ಕೆಯಾಗಿ ಸಾಲ ಮಾಡಿ ಮನೆ ನಿರ್ಮಿಸಿಕೊಂಡ ಹಾಗೂ ಈಗಾಗಲೇ ಮನೆ ನಿರ್ಮಾಣಕ್ಕೆ ಮುಂದಾದವರಿಗೆ ಸರ್ಕಾರದಿಂದ ಹಣ ಸಿಕ್ಕಿಲ್ಲ.

ಹೌದು… ಸರ್ಕಾರ ಅರ್ಹ ಫಲಾನುಭವಿಗಳಿಗೆ ನೀಡಿದ ವಸತಿ ಯೋಜನೆ ನಂಬಿ ಕಳೆದ 2015 ರಿಂದ 2021 ರ ಒಳಗೆ ಮನೆ ನಿರ್ಮಿಸಿಕೊಂಡ ಕುಂದಗೋಳ ಪಟ್ಟಣದ ಒಟ್ಟು 335 ಫಲಾನುಭವಿಗಳಿಗೆ ಇಂದಿಗೂ ಹಣ ಸಂದಾಯವಾಗಿಲ್ಲ. ಈ ಕಾರಣ ಸಾಲ ಮಾಡಿ, ಬಡ್ಡಿ ಹಣ ತಂದು, ಒಡವೆ ಒತ್ತೆ ಇಟ್ಟು ಸೂರು ಕಟ್ಟಿಕೊಂಡವರು ಯಾವಾಗ ಹಣ ಬರುತ್ತೆ ಎಂದು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಅಲೆದಾಡುವ ದುಸ್ಥಿತಿ ಕುಂದಗೋಳದಲ್ಲಿ ನಿರ್ಮಾಣವಾಗಿದೆ.

ಸದ್ಯ ಕುಂದಗೋಳ ಪಟ್ಟಣದಲ್ಲಿ 2015 ರಿಂದ ಇಲ್ಲಿಯವರೆಗೆ ಒಟ್ಟು 1543 ಮನೆಗಳು ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ದೊರೆತಿದ್ದು, ಅದರಲ್ಲಿ ಕೇವಲ 393 ಮನೆ ಬಿಲ್ ಆಗಿದ್ದರೇ, ಇನ್ನೂ 158 ಮನೆಗಳು ತಳಪಾಯದ ಹಂತದಲ್ಲಿ, 89 ಮನೆಗಳು ಗೋಡೆ ಹಂತದಲ್ಲಿ, 88 ಮನೆಗಳು ಛಾವಣಿ ಹಂತದಲ್ಲಿ ಬಿಲ್ ಬರಲೆಂದು ಕಾಯುತ್ತಾ ಮನೆ ಕಟ್ಟುವದನ್ನೇ ಸ್ಥಗಿಸಿಗೊಳಸಿವೆ.

ಇನ್ನೂ ಬಾಕಿ ಉಳಿದ 818 ಫಲಾನುಭವಿಗಳು ಸೌಲಭ್ಯ ಸಿಕ್ಕರೂ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಮನೆ ನಿರ್ಮಾಣಕ್ಕೆ ಮುಂದಾಗದೆ ಪಟ್ಟಣ ಪಂಚಾಯಿತಿಗೆ ಅಲೆದಾಟದಲ್ಲಿ ಸಮಯ ಕಳೆಯುತ್ತಿದ್ದಾರೆ.

ಒಟ್ಟಾರೆ ಸರ್ಕಾರದ ವಸತಿ ಸೌಲಭ್ಯ ಮೂರ್ನಾಲ್ಕು ವರ್ಷ ಕಳೆದರೂ ಜನರಿಗೆ ಹಣ ನೀಡದೆ ಸುಮ್ಮನಿರುವ ಕಾರಣ ಜನ ಬಡ್ಡಿ ಸಾಲದಲ್ಲೇ ಮುಳುಗಿದ್ದಾರೆ. ಸರ್ಕಾರ ಈ ಅವ್ಯವಸ್ಥೆಯನ್ನು ಕಣ್ತೆರೆದು ನೋಡಲೇಬೇಕಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ವಿಶೇಷ, ಕುಂದಗೋಳ

Edited By :
Kshetra Samachara

Kshetra Samachara

22/08/2022 04:23 pm

Cinque Terre

23.27 K

Cinque Terre

1

ಸಂಬಂಧಿತ ಸುದ್ದಿ