ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇದು ಬೈಸಿಕಲ್ ನಿಲ್ದಾಣವೋ, ಇಲ್ಲ ಕಾರ್, ಬೈಕ್ ಪಾರ್ಕಿಂಗ್ ಜಾಗವೋ.?

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅಡಿಯಲ್ಲಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಬೈಸಿಕಲ್ ನಿಲ್ದಾಣಗಳನ್ನು ಮಾಡಲಾಗಿದೆ. ಆದರೆ ಈ ನಿಲ್ದಾಣಗಳು ಈಗ ಬೈಕ್, ಕಾರ್ ಪಾರ್ಕಿಂಗ್ ಆಗಿ ಜಾಗವಾಗಿವೆ.

ಹೌದು. ಹೀಗೆ ಬೈಸಿಕಲ್ ನಿಲ್ದಾಣದಲ್ಲಿ ಕಾರು ಪಾರ್ಕಿಂಗ್ ಮಾಡಿರುವ ದೃಶ್ಯ ಕಂಡುಬಂದಿದ್ದು, ನಗರದ ತೋಳನಕೆರೆ ಹತ್ತಿರದಲ್ಲಿರುವ ಬೈಸಿಕಲ್ ನಿಲ್ದಾಣದಲ್ಲಿ. ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆಯು ನಗರದಲ್ಲಿ ಬೈಸಿಕಲ್ ವ್ಯವಸ್ಥೆಯನ್ನು ಮಾಡಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಬೈಸಿಕಲ್ ನಿಲ್ದಾಣಗಳು ಪಾಳು ಬಿದ್ದಂತಾಗಿವೆ. ಹೀಗಾಗಿ ಈ ನಿಲ್ದಾಣಗಳಲ್ಲಿ ಜನ ಬೈಕ್ ಮತ್ತು ಕಾರ್ ಪಾರ್ಕಿಂಗ್ ಮಾಡುತ್ತಿದ್ದಾರೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದಂತಾಗಿದೆ. ಕೂಡಲೇ ಪ್ರತಿಯೊಂದು ಬೈಸಿಕಲ್ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ನಿರ್ವಹಣೆಗೆ ನೇಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

19/08/2022 12:15 pm

Cinque Terre

64.81 K

Cinque Terre

5

ಸಂಬಂಧಿತ ಸುದ್ದಿ