ಹುಬ್ಬಳ್ಳಿ : ಇದ್ ಎಲ್ಲಿ ಮಳೆನಾಡನ್ಯಾಗ್ ಗುಡ್ಡ ಗಿಡ್ಡಾ ಕುಸದ್ ರಸ್ತೆ ಕಟ್ಟ ಆಗೈತಿ ಅನ್ನಕೋ.. ಬ್ಯಾಡ್ರೀ...
ಇದ್ ನಮ್ಮ ಹುಬ್ಬಳ್ಳಿ ಯ ಕುಮರಿ ಪೇಟ ಪೋಲಿಸ್ ಸ್ಟೇಷನ್ ಹಿಂದ್ ಇರುವ ರಾಜಕಾಲುವೆಯ ಬ್ರಿಜ್ ರೀ ಪ್ಪಾ..... ಪುನೇಕ್ ಯಾರ್ ಜೀವಕ್ಕೂ ಏನ್ ಅಪಾಯ ಆಗಿಲ್ಲ....
ಮನ್ನೇ...ಮನ್ನೆರೇ... ಇದಕ್ ಟಾರ್ ಹಾಕ್ಯಾರ್... ಅವಾಗರೇ ಇದ್ ಗಟ್ಟಿ ಐತಿಯೋ ಇಲ್ಲೋ ಅನ್ನುದ್ ನೋಡ ಬೇಕಾಗಿತ್ತ್... ಆದ್ರ್ ಏನ್ ಮಾಡುದ್ ಇಲ್ಲಿ ಅಧಿಕಾರಿಗಳು ಹಂಗ್ ಕಣ್ಣ ಮುಚ್ಚಿ ಕೆಲಸಾ ಮಾಡತ್ತಾರ್.. ಅದರಾಗ ಕಾರ್ಪೋರೆಟರ್ ಅಂತು ಲೆಕ್ಕಕ್ ಇಲ್ಲ....
ಈಗ ಎಲ್ಲಾ ಬಿದ್ದ ಮಣ್ಣಾಗ್ ಸೇರಿದ್ ಮ್ಯಾಗ್ ಅಧಿಕಾರಿಗಳು ಮತ್ತ್ ತಮ್ಮನ್ನ ತಾವ್ ಕಾರ್ಪೋರೆಟರ್ ಅಂತ್ ಕರಕೊಂತ ಅಡ್ಯಾಡುವ ಪ್ರಕಾಶ ಬುರಬುರೆ ಅವರು ಬಂದ್ ಇದನ್ ನೋಡೇವಿ ಅಂತ್ ಪೋಟೋ ಹೊಡಸ್ ಕೊಂಡ ಹೋದ್ರ್...
ಒಟ್ಟನ್ಯಾಗ್ ಮಂದಿ ರೊಕ್ಕಾ ಹಾಳ ಮಾಡಿ... ಮಜಾ ಮಾಡ್ರೀ...
ಇಷ್ಟಲಿಂಗ ಪಾವಟೆ ಸ್ಪೇಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
06/08/2022 11:43 am