ಕುಂದಗೋಳ: ಇದು ಅಧಿಕಾರಿಗಳ ನಿರ್ಲಕ್ಷ್ಯವೋ, ಬೇಜವಾಬ್ದಾರಿಯೋ, ಜನರ ಒಲ್ಲದ ಮನಸ್ಸೋ ಗೊತ್ತಿಲ್ಲ. ಆದ್ರೇ , ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ ಒಂದು ಲಕ್ಷಕ್ಕೂ ಅಧಿಕ ಹಣ ಲಾಸ್ ಎಂದೇ ಹೇಳಬಹುದು, ಅರೆ ಅದ್ಹೇಗೆ ? ಅಂದ್ರಾ ! ಇಲ್ನೋಡಿ... ಕುಂದಗೋಳ ಪಟ್ಟಣದಲ್ಲಿ ನೂತನ ಪಶು ಆಸ್ಪತ್ರೆ ನಿರ್ಮಾಣಕ್ಕೆ ಮೊದಲು ಹಳೆ ಆಸ್ಪತ್ರೆ ಕಟ್ಟಡ ಕೆಡವಲಾಗಿತ್ತು.
ಆ ಕಟ್ಟಡದ ಬಾಗಿಲು, ಕಿಟಕಿ, ಕಂಬ, ಮೇಲ್ಪದರ ಹಂಚುಗಳು, ಕುರ್ಚಿ, ಟೇಬಲ್ ಹೀಗೆ ನಾನಾ ಪೀಠೋಪಕರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನಿಗದಿ ಪಡಿಸಿದ ಮೌಲ್ಯದಂತೆ 1 ಲಕ್ಷ 53 ಸಾವಿರ ರೂಪಾಯಿಗೆ ಟೆಂಡರ್ ಕರೆದರೂ ಖರೀದಿಗೆ ಯಾರೂ ಮನಸ್ಸು ಮಾಡಲಿಲ್ಲವೋ ಅಥವಾ ಮೌಲ್ಯ ಜಾಸ್ತಿ ಎಂದು ಹಿಂಜರಿದರೋ ಗೊತ್ತಿಲ್ಲ. ಆದ್ರೆ, ಕಟ್ಟಿಗೆ ಮಾತ್ರ ಈ ರೀತಿ ಹರಾಜು ಆಗದೆ ಕೊಳೆಯುತ್ತಲಿವೆ.
ಕಡಿಮೆ ಎಂದ್ರೂ ಲಕ್ಷ ಹಣದ ಪೀಠೋಪಕರಣಗಳು ಈ ರೀತಿ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಮಳೆಯಲ್ಲೇ ಬಿದ್ದಿದ್ದು ಕಟ್ಟಿಗೆ ಹುಳುಕು ಬಿದ್ದು ಕೊಳೆಯುತ್ತಾ ಇದ್ರೇ, ಹಂಚುಗಳು ಮಳೆಗೆ ನೆನೆದು ಒಡೆಯುತ್ತಿವೆ.
ಹಲವಾರು ತಿಂಗಳುಗಳಿಂದ ಅನಾಥವಾಗಿ ಹೊರಗಡೆ ಬಿದ್ದಿರುವ ಸಾಮಗ್ರಿಗಳಿಗೆ ಪುನಃ ಟೆಂಡರ್ ಸಿಗಲಿ. ಹೀಗೆ ಕೊಳೆತು ಹೋಗುವ ಬದಲಾಗಿ ಪರ್ಯಾಯ ಉಪಯೋಗವಾಗಲಿ ಎಂಬುದು ಜನರ ಅಭಿಪ್ರಾಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ
Kshetra Samachara
21/07/2022 04:45 pm