ಧಾರವಾಡ: ಧಾರವಾಡದಲ್ಲಿರುವ ಟಾಟಾ ಮಾರ್ಕೊಪೊಲೊ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 6 ಸಾವಿರ ರೂಪಾಯಿ ಮಧ್ಯಂತರ ಪರಿಹಾರ ನೀಡಬೇಕು ಎಂದು ರಾಜ್ಯಪಾಲರು ಆದೇಶ ಮಾಡಿದ್ದಾರೆ. ಆದ್ರೂ ಕಂಪೆನಿಯ ಆಡಳಿತ ಮಂಡಳಿ ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿ ಕಂಪೆನಿಯ ಉದ್ಯೋಗಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಕಂಪೆನಿ ಉದ್ಯೋಗಿಗಳು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೊರೊನಾ ಸಂದರ್ಭದಲ್ಲಿ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಿಲ್ಲ. ಅಲ್ಲದೇ ಕಡಿಮೆ ವೇತನ ನೀಡಲಾಗಿದೆ. ಈ ಸಂದರ್ಭದಲ್ಲಿ ಮೂರ್ನಾಲ್ಕು ತಿಂಗಳು ನೌಕರರಿಗೆ 6 ಸಾವಿರ ರೂಪಾಯಿ ಪರಿಹಾರ ಕೊಡಬೇಕು ಎಂದು ರಾಜ್ಯಪಾಲರು ಆದೇಶ ಮಾಡಿದ್ದರು.
ಆಗ ಕಂಪೆನಿ ಒಂದು ತಿಂಗಳು ಮಾತ್ರ ಪರಿಹಾರ ಕೊಟ್ಟಂತೆ ಮಾಡಿ ಮತ್ತೆ ತನ್ನ ಮೊಂಡುತನ ಪ್ರದರ್ಶನ ಮಾಡುತ್ತಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಿ ನೌಕರರ ಹಿತ ಕಾಯಬೇಕು ಎಂದು ಒತ್ತಾಯ ಮಾಡಲಾಯಿತು.
Kshetra Samachara
16/07/2022 01:29 pm