ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಬೀಳುವ ಮೊದಲೇ ಜೋಕೆ !

ಕುಂದಗೋಳ: ಏನ್ರೀ ಕುಂದಗೋಳ ಮತಕ್ಷೇತ್ರದ ಅದರಗುಂಚಿ, ಕೊಟಗೊಂಡಹುಣಸಿ, ಮುರಾರಹಳ್ಳಿ ಮಂದಿ ನಿಮ್ಮ ಯಾವುದೇ ಕೆಲಸ ಇದ್ರ ನೀವು ನಿಮ್ಮ ಅದರಗುಂಚಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಬಂದ್ರ ಬಾಳ್ ಬಾಳ್ ಅಂದ್ರ ಬಾಳ್ ಹುಷಾರ್ ನೋಡ್ರಿ ಪಾ.

ಯಾಕಂದ್ರ ! ಕಳೆದ ಹಲವಾರು ವರ್ಷಗಳಿಂದ ಈ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ ತರಹ ಸೋರಾಕತ್ತತಿ. ಹಿಂಗಾಗಿ ಎಲ್ಲೇ ಬೇಕ ಅಲ್ಲೇ ಬಕೆಟ್ ಇಟಗೊಂಡು ಪಾಪ.. ಗ್ರಾಮ ಲೆಕ್ಕಾಧಿಕಾರಿಗಳು ಕೆಲ್ಸಾ ಮಾಡಾಕತ್ತಾರ. ನಿಮ್ಮದೇ ದಾಖಲೆ ಕಾಗದ ಪತ್ರ, ಉಳಿಸಿಕೊಳ್ಳಾಕ್ ಸರ್ಕಸ್ ನಡಸ್ಯಾರ್.

ಆ ಮ್ಯಾಲೆ ಇದ್ ಒಂದೇ ದಿನದ ಕಥಿ ಅಲ್ರೀಪಾ, ಕಳೆದ ಹಲವಾರು ವರ್ಷಗಳಿಂದ ಮಳೆಗಾಲ ಬಂತಂದ್ರ ಸಾಕು ಈ ಕಚೇರಿ ಪರಿಸ್ಥಿತಿ ಹಿಂಗ ಇರತೇತಿ. ಹಾಸುಗಲ್ಲು ಎಲ್ಲ ಪೂರ್ತಿ ತೊಯ್ದು ಹೋಗಿರತಾವು. ಯಾವಾಗ ಯಾರು ಬಿದ್ದ ಎಲ್ಲೆರ ಸೊಂಟಾ ಮುರುಕೊಂಡ್ರ ಯಾರೂ ಜವಾಬ್ದಾರಿ ಇಲ್ಲ ಮತ್ತ...

ದಿನಾಲೂ ಮೂರು ಹಳ್ಳಿ ಮಂದಿ ಅದರಲ್ಲೂ ರೈತಾಪಿ ಜನ ವಯಸ್ಸಾದವ್ರು, ಹೆಣಮಕ್ಕಳು, ಕಂದಾಯ, ಪಿಂಚಣಿ, ಜನನ, ಮರಣ ಪ್ರಮಾಣಪತ್ರ ಹಿಂಗ್ ನಾನಾ ಕೆಲಸಕ್ಕೆ ಇಲ್ಲಿಗೆ ಬರತಾರ. ಈ ಮಳಿ ಹೊಡೆತಕ್ಕ ತಮ್ಮ ಮನಿ ಬಿದ್ರೂ ಇಲ್ಲೇ ಬಂದು ತಲಾಟಿ ಸಾಹೇಬ್ರಿಗೆ ಅರ್ಜಿ ಕೊಡ್ಬೇಕು.

ವಿಚಿತ್ರ ಏನಪಾ ಅಂತಂತ್ರ ಈಗ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿನ ಈ ನಮೂನಿ ಸೋರಾಕತ್ತೇತಿ..ಇವತ್ತಿಲ್ಲ ನಾಳೆ ಎಲ್ಲ ಕಪ್ಪರಿಸಿಗೊಂಡು ದೊಪ್ಪನೆ ಬೀಳುವಂಗ ಐತಿ. ಎಲ್ಲಿ ನನ್ನ ತೆಲಿ ಮ್ಯಾಲೆ ಎಲ್ಲ ಬೀಳ್ತೇತೋ ಯಪ್ಪಾ ಶಿವನ ಅಂತ ತಲಾಟಿ ಸಾಹೇಬ್ರು ಹೆದರಿಕೊಂತ ಕೆಲಸ ಮಾಡಾಕತ್ತಾರ. ಇಷ್ಟೆಲ್ಲ ಇದ್ರೂ ಜನಪ್ರತಿನಿಧಿಗಳು, ಮೇಲಾಧಿಕಾರಿಗಳು ಕಣ್ಮುಚ್ಚಿ, ಬಾಯಿ ಎಲ್ಲ ಮುಚಗೊಂಡ ಕುಂತಬಿಟ್ಟಾರ.

ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಏನ್ ಸುಮ್ಮ ಕುಂತಿಲ್ಲ. ಮೇಲಾಧಿಕಾರಿಗಳಿಗೆ ಮನವಿ ಮಾಡ್ಯಾರ. ಜನರು ಜನಪ್ರತಿನಿಧಿಗಳಿಗೆ ತಿಳಿಸ್ಯಾರ. ಆದ್ರ ಏನ್ ಮಾಡೋದು? ಅದರಿಂದ ಏನೂ ಫಾಯದಾ ಆಗಿಲ್ಲ. ಅಲ್ರಿಪಾ ಯಾರದರ ನಡ ಮುರಿಯೂಕಿಂತ ಮೊದಲ, ಕಟ್ಟಡ ರಿಪೇರಿ ಮಾಡಸ್ರಿ..ಇಲ್ಲಂದ್ರ ಹೊಸ ಕಟ್ಟಡ ಕಟ್ಟಸ್ರಿ..

Edited By : Shivu K
Kshetra Samachara

Kshetra Samachara

12/07/2022 08:35 am

Cinque Terre

52.79 K

Cinque Terre

4

ಸಂಬಂಧಿತ ಸುದ್ದಿ