ಧಾರವಾಡ: ಖಿಲಾಫತ್, ಅಸಹಕಾರ ಚಳವಳಿಯಲ್ಲಿ ದೇಶಾದ್ಯಂತ ಅಸಂಖ್ಯಾತ ಹೋರಾಟಗಾರರು ಭಾಗವಹಿಸಿದ್ದರು. ಅದರಲ್ಲಿ ಧಾರವಾಡದ ಹೋರಾಟಗಾರರೂ ಭಾಗವಹಿಸಿ ವೀರ ಮರಣವನ್ನು ಹೊಂದಿದ್ದಾರೆ. ಅಂತಹ ಸ್ವಾತಂತ್ರ್ಯ ವೀರರನ್ನು ಪಡೆದ ನಮ್ಮ ಧಾರವಾಡ ಪುಣ್ಯಭೂಮಿ ಆಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಧಾರವಾಡದ ಜಕಣಿಬಾವಿ ಹತ್ತಿರ ನಿರ್ಮಿಸಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಪಣೆ ಹಾಗೂ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು.
ದೇಶಾದ್ಯಂತ ಹಮ್ಮಿಕೊಂಡಿದ್ದ ಖಿಲಾಫತ್ ಚಳುವಳಿ ಧಾರವಾಡದಲ್ಲಿಯೂ ನಡೆದ ಸಂದರ್ಭದಲ್ಲಿ ಅನೇಕ ಸ್ವಾತಂತ್ರ್ಯ ಯೋಧರು ಭಾಗವಹಿಸಿದ್ದರು. ಧಾರವಾಡದಲ್ಲಿ ಚಳವಳಿ ಉಗ್ರ ಸ್ವರೂಪ ಪಡೆದು ಅನೇಕರು ಭಾರಿ ಪ್ರತಿಭಟನೆ ಮಾಡಿದರು. ಈ ವೇಳೆ ನಡೆದ ಗೋಲಿಬಾರ್‌ನಲ್ಲಿ ಧಾರವಾಡದ ಮಲ್ಲಿಕ್ ಸಾಬ್, ಗೌಸ್ ಸಾಬ್, ಅಬ್ದುಲ್ ಗಫಾರ್ ಚೌಕಥಾಯಿ ಎಂಬ ಮೂವರು ಕಾರ್ಯಕರ್ತರು ವೀರ ಮರಣವನ್ನಪ್ಪಿದ್ದಾರೆ. ಅಂತಹ ಮಹಾನುಭಾವರು ನೆಲೆಸಿದಂತಹ ಭೂಮಿ ನಮ್ಮದು. ಈ ಇತಿಹಾಸ ನಮ್ಮ ಮುಂದಿನ ಪೀಳಿಗೆಗೆ ಗೊತ್ತಾಗಬೇಕು. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ ಎಂದರು.
Kshetra Samachara
01/07/2022 12:10 pm