ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ:ಅಧಿಕಾರಿಗಳೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಯಾವಾಗ ?

ಕುಂದಗೋಳ:ಗ್ರಾಮೀಣ ಜನರಿಗೆ ಶುದ್ಧ ನೀರು ನೀಡಿ ಆರೋಗ್ಯ ಮತ್ತು ನೈರ್ಮಲ್ಯ ಒದಗಿಸಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಕುಂದಗೋಳ ತಾಲೂಕಿನ ಕಳಸ ಗ್ರಾಮದಲ್ಲಿ ಈ ರೀತಿ ದುರಸ್ತಿ ಕಾಣದೆ ಬಂದ್ ಆಗಿವೆ.

ಹೌದು ! ಮನುಷ್ಯನ ನಿತ್ಯ ಜೀವನಕ್ಕೆ ಅವಶ್ಯಕವಾದ ಜೀವ ಜಲ ಪೊರೈಸಬೇಕಾದ ಕಳಸ ಗ್ರಾಮದಲ್ಲಿನ ಮೂರು ಶುದ್ಧ ನೀರಿನ ಘಟಕಗಳ ಪೈಕಿ ಎರೆಡು ಶುದ್ಧ ಕುಡಿಯುವ ನೀರಿನ ಘಟಕಗಳು ಕಳೆದ ಹಲವಾರು ದಿನಗಳಿಂದ ಬಂದ್ ಆಗಿವೆ.

ಈ ಪರಿಣಾಮ 7,219 ಜನಸಂಖ್ಯೆ ಹೊಂದಿದ ಬೃಹತ್ ಗ್ರಾಮ ಕಳಸದ ಜನತೆ ಬೋರವೆಲ್ ಹಾಗೂ ಕೆರೆಯ ನೀರು ಕುಡಿಯುತ್ತಿದ್ದು, ಗ್ರಾಮದ ಜನತೆ ಆರೋಗ್ಯದ ಸಮಸ್ಯೆ ಎದುರಿಸುವ ಮುನ್ನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಕಾಣಬೇಕಾಗಿದೆ.

ಈ ಬಗ್ಗೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಿಸಿ ಜನರಿಗೆ ಶುದ್ಧ ಜಲ ನೀಡಬೇಕಾಗಿದೆ.

Edited By :
Kshetra Samachara

Kshetra Samachara

09/06/2022 10:10 pm

Cinque Terre

53.51 K

Cinque Terre

4

ಸಂಬಂಧಿತ ಸುದ್ದಿ