ಹುಬ್ಬಳ್ಳಿ: ಇಂದು ಸುರಿದ ಭಾರಿ ಮಳೆಯಿಂದಾಗಿ ಒಂದೆಡೆ ವಾಣಿಜ್ಯ ನಗರಿ ತಂಪಾದರೆ, ಮತ್ತೊಂದೆಡೆ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆ ನದಿಯಂತಾಗಿದೆ.
ಹೌದು. ಹೀಗೆ ವಾಹನ ಸವಾರರು ರಸ್ತೆ ದಾಟಲು ಪರದಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ. ಇಂದು ಸುರಿದ ಮಳೆಯಿಂದಾಗಿ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆ ಮೇಲೆ ನದಿಯಂತೆ ನೀರು ಹರಿಯಿತು. ಇದಕ್ಕೆಲ್ಲಾ ಕಾರಣ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಎಂದು ಹುಬ್ಬಳ್ಳಿ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಒಂದು ಚಿಕ್ಕ ಮಳೆಯಾದರೂ ರಸ್ತೆಯಲ್ಲಿಯೇ ನೀರು ನೀಲ್ಲುತ್ತದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಅದು ಹೇಗೆ ರಸ್ತೆ ಮಾಡಿದ್ದಾರೆ ಎಂಬುದು ಜನರಲ್ಲಿ ಪ್ರಶ್ನೆ ಮೂಡಿಸಿದೆ. ಸಂಬಂಧಿಸಿದ ಅಧಿಕಾರಿಗಳು ಮುಂಬರುವ ಮಳೆಯಿಂದಾಗಿ ತೊಂದರೆ ಆಗಲಾರದಂತೆ ಏನಾದರು ವ್ಯವಸ್ಥೆ ಮಾಡಬೇಕಾಗಿದೆ ಎನ್ನುವುದು ಪಬ್ಲಿಕ್ ಆಗ್ರಹ.
Kshetra Samachara
02/06/2022 08:05 pm