ಹುಬ್ಬಳ್ಳಿ: ದಿನನಿತ್ಯ ನೂರಾರು ಪ್ರಯಾಣಿಕರು ಓಡಾಡುವ ಸ್ಥಳವದು. ಬೇರೆ ಬೇರೆ ಜಿಲ್ಲೆ- ರಾಜ್ಯಗಳ ಜನರ ಸಂಗಮ ತಾಣವೂ ಹೌದು. ಆದ್ರೆ, ಇಲ್ಲಿ ಪ್ರಯಾಣಿಕರ ಆರೋಗ್ಯ ಕಾಪಾಡಬೇಕಾದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ! ಅಷ್ಟಕ್ಕೂ ಅಲ್ಲಿನ ಸ್ಥಿತಿಗತಿ ಬಗ್ಗೆ ತೋರಿಸ್ತೀವಿ ಬನ್ನಿ...
ಹೌದು, ಇಲ್ಲಿ ಎಲ್ಲೆಂದರಲ್ಲಿ ಕಸವೋ ಕಸ. ಮೂಲೆಯಲ್ಲಿ ನಿಂತು ಮೂತ್ರ ಮಾಡುತ್ತಿರುವ ಸಾರ್ವಜನಿಕರು. ದುರ್ವಾಸನೆಗೆ ಕಂಗಲಾಗಿರುವ ಪ್ರಯಾಣಿಕರು. ಈ ಚಿತ್ರಣ ಕಂಡು ಬಂದಿದ್ದು ಹುಬ್ಬಳ್ಳಿ ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಲ್ಲಿ. ಪ್ರಯಾಣಿಕರ ಆರೋಗ್ಯ ದೃಷ್ಟಿಯಿಂದ ಬಸ್ ನಿಲ್ದಾಣ ಸ್ವಚ್ಛವಾಗಿರಬೇಕಿತ್ತು. ಆದರೆ, ಅದ್ಯಾವುದೂ ಇಲ್ಲದೆ ನಿರ್ಲಕ್ಷ್ಯವೇ ಎದ್ದು ಕಾಣುತ್ತಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಿಲ್ದಾಣದಲ್ಲಿ ಸಾರ್ವಜನಿಕ ಮೂತ್ರಾಲಯ ಇದ್ರೂ ಕೂಡ, ಕೆಲವು ಪ್ರಯಾಣಿಕರಿಗೆ ಹೊರಗಡೆಯೇ ಮೂತ್ರ ವಿಸರ್ಜಿಸಿ ಅಭ್ಯಾಸ, ಹಠ. ದಿನನಿತ್ಯ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಪ್ರಯೋಜನ ಶೂನ್ಯ. ಸ್ವಚ್ಛತೆ ಬಗ್ಗೆ ನಿರಂತರ ಅನಾದರ ತೋರುವ ಪ್ರಯಾಣಿಕರಿಗೆ ತೀವ್ರ ಎಚ್ಚರಿಕೆ ಕೊಟ್ಟು, ಕಠಿಣ ಕ್ರಮಕ್ಕೆ ಮುಂದಾಗಲೇ ಬೇಕಾಗಿದೆ. ಜತೆಗೆ ಅಧಿಕಾರಿಗಳು ಪ್ರಸ್ತುತ ಸ್ವಚ್ಛತೆಯತ್ತ ಚಿತ್ತ ಹರಿಸಿ, ಬಸ್ ನಿಲ್ದಾಣವನ್ನು ಮಾದರಿ ನಿಲ್ದಾಣವಾಗಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು.
Kshetra Samachara
07/03/2022 04:38 pm