ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ: ಡಿಸಿ

ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿ ನಗರದ ಜನನಿಬಿಡ ಹಾಗೂ ವಾಹನ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಜಿಬ್ರಾ ಕ್ರಾಸಿಂಗ್ ಅಳವಡಿಸಬೇಕು. ಅಪಾಯಕಾರಿ ರಸ್ತೆ ಉಬ್ಬುಗಳನ್ನು ವೈಜ್ಞಾನಿಕವಾಗಿ ಸರಿಪಡಿಸಿ, ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕು ಎಂದು ಮಹಾನಗರಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.

ವೀಡಿಯೋ ಸಂವಾದದ ಮೂಲಕ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರವಾಡ, ಅಮ್ಮಿನಭಾವಿ, ಸವದತ್ತಿ ರಸ್ತೆಯಲ್ಲಿರುವ ಅವೈಜ್ಞಾನಿಕ ಉಬ್ಬುಗಳು ಅಪಾಯಕಾರಿಯಾಗಿದ್ದು, ಒಂದು ವಾರದೊಳಗೆ ಅವುಗಳನ್ನು ತೆರವುಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚಿಸಿದರು.

ನೈಋತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖಂಡ ಮಾತನಾಡಿ, ರೈಲ್ವೆ ಸ್ಟೇಷನ್ ಸುತ್ತಮುತ್ತ ಹಾಗೂ ರೈಲ್ವೆ ಸ್ಟೇಷನ್‌ಗೆ ಆಗಮಿಸುವ ರಸ್ತೆಗಳಲ್ಲಿ ಅನಗತ್ಯ ವಾಹನಗಳ ನಿಲುಗಡೆಯಾಗುತ್ತಿವೆ. ಅಂಗಡಿ, ಮುಂಗಟ್ಟುಗಳು ರಸ್ತೆಯನ್ನು ಆಕ್ರಮಿಸಿಕೊಂಡಿರುವುದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಸ್ಪಂದಿಸಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಲು ನಿರ್ದೇಶನ ನೀಡಿದರು.

ರಸ್ತೆ ಸುರಕ್ಷತಾ ಬಾಬತ್ತಿನಲ್ಲಿ ಬಾಕಿ ಉಳಿದಿರುವ ಅನುದಾನವನ್ನು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ರಸ್ತೆಯ ಉಬ್ಬುಗಳಿಗೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಲು ಬಳಸಬೇಕು. ಪಾಲಿಕೆಯ ಅನುದಾನವನ್ನೂ ಸಹ ಹೆಚ್ಚುವರಿಯಾಗಿ ಬಳಸಿಕೊಳ್ಳಬೇಕು ಎಂದರು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ 2021ರ ಸೆಪ್ಟಂಬರ್‌ನಿಂದ ಡಿಸೆಂಬರ್ ರವರೆಗೆ ವಿವಿಧ ವರ್ಗದ ಸಾರಿಗೆ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನೀಡಲಾದ ರಹದಾರಿಗಳಿಗೆ ಘಟನೋತ್ತರ ಅನುಮೋದನೆಯನ್ನು ನೀಡಲಾಯಿತು.

ವಿ.ಆರ್‌.ಎಲ್‌.ಸಮೂಹ ಸಂಸ್ಥೆಯವರು ಕ್ಯಾರೇಜ್ ಬೈ ರೋಡ್ ಆಕ್ಟ್ ಅಡಿಯಲ್ಲಿ ಲೈಸೆನ್ಸ್ ನವೀಕರಣಕ್ಕಾಗಿ ಸಲ್ಲಿಸಲಾದ ಅರ್ಜಿಯನ್ನು ಸಭೆಯಲ್ಲಿ ಪರಿಶೀಲಿಸಿ ಮುಂದಿನ ಅವಧಿಗೆ ನವೀಕರಿಸಲು ಅನುಮೋದನೆ ನೀಡಲಾಯಿತು.

ಪಿಂಕ್ ಆಟೊ ರಿಕ್ಷಾ ಪರಿಕಲ್ಪನೆಯಡಿಯಲ್ಲಿ ಮಹಿಳಾ ಆಟೊ ರಿಕ್ಷಾ ಚಾಲಕರುಗಳಿಗೆ ಉತ್ತೇಜನ ನೀಡಿ, ಮಹಿಳಾ ಸಬಲೀಕರಣಗೊಳಿಸಲು ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಸಂಸ್ಥೆಯು ಮಹಿಳಾ ಆಟೊ ರಿಕ್ಷಾ ಚಾಲಕರಿಗೆ ಹೊಸದಾಗಿ ರಹದಾರಿ ನೀಡುವಂತೆ ಮಾಡಿಕೊಂಡಿರುವ ಮನವಿಯನ್ನು ಪ್ರಾಧಿಕಾರದಲ್ಲಿ ಪರಿಶೀಲಿಸಿ, ರಹದಾರಿ ಮಂಜೂರಾತಿಗೆ ಘಟನೋತ್ತರ ಅನುಮೋದನೆಯನ್ನು ನೀಡಲಾಯಿತು.

Edited By : Nirmala Aralikatti
Kshetra Samachara

Kshetra Samachara

15/01/2022 11:54 am

Cinque Terre

16.11 K

Cinque Terre

4

ಸಂಬಂಧಿತ ಸುದ್ದಿ