ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

83 ಸಾವಿರ ರೈತರಿಗೆ 67 ಕೋಟಿ ರೂಪಾಯಿ ಬೆಳೆಹಾನಿ ಪಾವತಿ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕಳೆದ ಜುಲೈ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ವಿವಿಧ ಕೃಷಿ, ತೋಟಗಾರಿಕೆ ಬೆಳೆಗಳ ಹಾನಿಯ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ದಿನಂಪ್ರತಿ ದಾಖಲಿಸಲಾಗಿದ್ದು ಈವರೆಗೆ 83,266 ರೈತರಿಗೆ ಸರಕಾರದಿಂದ 67.45 ಕೋಟಿ ರೂಪಾಯಿ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

6 ಮನೆಗಳು ಪೂರ್ಣ ಹಾನಿಯಾಗಿದ್ದು ಪ್ರತಿ ಮನೆಗೆ 5 ಲಕ್ಷ ಪಾವತಿಸಬೇಕಾಗಿದ್ದು ಮೊದಲನೇ ಕಂತು 95,100 ರೂಪಾಯಿಗಳಂತೆ ಒಟ್ಟು 5,70,600 ರೂಪಾಯಿ ಪಾವತಿಸಿದೆ.

492 ಮನೆಗಳು ತೀವ್ರತರ ಹಾನಿಯಾಗಿದ್ದು ಮೊದಲನೇ ಕಂತು 95,100 ರೂಪಾಯಿಗಳಂತೆ 4,67,89,200 ರೂಪಾಯಿ ಪಾವತಿಸಿದೆ 960 ಮನೆಗಳು ಭಾಗಶಃ ಹಾನಿಯಾಗಿದ್ದು ತಲಾ 50 ಸಾವಿರ ರೂಪಾಯಿಗಳಂತೆ ಒಟ್ಟು 4 ಕೋಟಿ 80 ಲಕ್ಷ ರೂಪಾಯಿ ಪರಿಹಾರ ಧನ ಪಾವತಿ ಮಾಡಲಾಗಿದೆ. ಪರಿಹಾರ ಧನವನ್ನು ಫಲಾನುಭವಿಗಳ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ.

ಈವರೆಗೆ ಒಟ್ಟು 1458 ಹಾನಿಯಾದ ಮನೆಗಳಿಗೆ 9.54 ಕೋಟಿ ರೂಪಾಯಿ ಪರಿಹಾರ ಧನ ಪಾವತಿಸಲಾಗಿದೆ. ಉಳಿದ ಮನೆಗಳ ಹಾಗೂ ರೈತರ ಬೆಳೆ ಹಾನಿ ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

11/12/2021 07:57 am

Cinque Terre

41.02 K

Cinque Terre

12

ಸಂಬಂಧಿತ ಸುದ್ದಿ