ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾರ್ಯಕ್ಷಮತೆ ಹೆಚ್ಚಿಸಲು ಮುಂದಾದ ಮಹಾನಗರ ಪಾಲಿಕೆ:ಸ್ವಚ್ಚತೆಗೆ ಮತ್ತೇ 25 ಟಿಪ್ಪರ್ ಬಲ

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು,ಅವಳಿನಗರದಲ್ಲಿ ಜನವಸತಿ ಪ್ರದೇಶಗಳು ವಿಸ್ತರಣೆಯಾಗುತ್ತಿವೆ.ಅಲ್ಲದೇ ವಾಣಿಜ್ಯ ಕಟ್ಟಡಗಳು ನಿರ್ಮಾಣ ಹೆಚ್ಚಿದಂತೆ, ಕಸ ಸಂಗ್ರಹದ ಪ್ರಮಾಣ ಹೆಚ್ಚುತ್ತಲೇ ಇದೆ.ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಕೂಡ ತನ್ನ ಕಾರ್ಯಕ್ಷಮತೆ ಹೆಚ್ಚಿಸಲು ಮುಂದಾಗಿದೆ.

ಹೌದು..ಸ್ವಚ್ಛ ನಗರ ನಿರ್ಮಾಣಕ್ಕಾಗಿ ಘನತ್ಯಾಜ್ಯ ನಿರ್ವಹಣೆಗಾಗಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ಮಹಾನಗರ ಪಾಲಿಕೆ, ಕಸ ಸಂಗ್ರಹಕ್ಕಾಗಿ ಮತ್ತೆ 25 ಆಟೊ ಟಿಪ್ಪರ್‌ಗಳನ್ನು ಖರೀದಿಸಲು ಮುಂದಾಗಿದೆ.ಸಾವಿರ ಮನೆಗಳಿಂದ ಕಸ ಸಂಗ್ರಹಿಸಲು ಒಂದು ಆಟೊ ಟಿಪ್ಪರ್‌ ಎಂಬ ನಿಯಮದಂತೆ, ಪಾಲಿಕೆಯು ಕಸ ಸಂಗ್ರಾಹಕ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಬರುತ್ತಿದೆ. ಸದ್ಯ ಹೊಸ ವಾಹನಗಳನ್ನು 14ನೇ ಹಣಕಾಸು ಯೋಜನೆಯಡಿ 3.80 ಕೋಟಿ ವೆಚ್ಚದಲ್ಲಿ ಖರೀದಿ ಮಾಡಲಾಗುತ್ತಿದೆ. ಪಾಲಿಕೆಯಲ್ಲಿ ಸದ್ಯ 191 ಆಟೊ ಟಿಪ್ಪರ್‌ಗಳಿದ್ದು, ಹೊಸ ವಾಹನಗಳು ಬಂದರೆ ಈ ಸಂಖ್ಯೆ 216ಕ್ಕೆ ಏರಿಕೆಯಾಗಲಿದ್ದು, ಅವಳಿನಗರದಲ್ಲಿ ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗುವ ಸಾಧ್ಯತೆ ಹೆಚ್ಚಿದೆ.

2016-17ರ ಅಂದಾಜಿನ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 1.86 ಲಕ್ಷ ಮನೆ ಮತ್ತು ವಾಣಿಜ್ಯ ಕಟ್ಟಡಗಳು ಇದ್ದವು. ಈಗ ಅದು ಸುಮಾರು 2.25 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಮನೆ, ವಸತಿ ಸಂಕೀರ್ಣ ಹಾಗೂ ವಾಣಿಜ್ಯ ಕಟ್ಟಡಗಳು ಹೆಚ್ಚುತ್ತಿರುವುದರಿಂದ ಕಸ ಸಂಗ್ರಹಕ್ಕೆ ಹೊಸದಾಗಿ 25 ಆಟೊ ಟಿಪ್ಪರ್‌ ಖರೀದಿಗೆ ಮಹಾನಗರ ಪಾಲಿಕೆ ಮುಂದಾಗಿದೆ.

ನಮ್ಮ ಅಪಾರ್ಟ್ಮೆಂಟ್ ಗಳಿಗೆ ಸರಿಯಾಗಿ ಕಸ ವಿಲೇವಾರಿ ವಾಹನ ಬರುತ್ತಿಲ್ಲ ಎಂಬುವಂತ ದೂರುಗಳನ್ನು ದೂರಮಾಡಲು ಪಾಲಿಕೆ ನಿರ್ಧಾರ ಕೈಗೊಂಡಿದ್ದು,ಈಗ ಮಹಾನಗರ ಪಾಲಿಕೆಗೆ 25 ಆಟೋ ಟಿಪ್ಪರ್ ಖರೀದಿಯಿಂದ ಮತ್ತಷ್ಟು ಕಾರ್ಯಕ್ಷಮತೆ ಹೆಚ್ಚಲಿದೆ.

Edited By : Manjunath H D
Kshetra Samachara

Kshetra Samachara

03/02/2021 04:53 pm

Cinque Terre

57.26 K

Cinque Terre

7

ಸಂಬಂಧಿತ ಸುದ್ದಿ