ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯಿಂದ ವನ್ಯಜೀವಿ ಹಾಗೂ ಪರಿಸರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಹಾಗಾಗಿ ಈ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಒತ್ತಾಯಿಸಿದೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಗಾಂವಕರ್, ಈ ಯೋಜನೆ ತಡೆಗಟ್ಟಲು ಸಾರಿಗೆ, ಅರಣ್ಯ ಒತ್ತುವರಿದಾರರ ಲಾಬಿ ಪ್ರಬಲವಾಗಿ ಕೆಲಸ ಮಾಡುತ್ತಿವೆ. ಹಾಗಾಗಿ ಯೋಜನೆ ವಿಳಂಬವಾಗುತ್ತಿದೆ. ಆದರೆ ವಾಸ್ತವದಲ್ಲಿ ವನ್ಯಜೀವಿ ಹಾಗೂ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡಲಾಗಿತ್ತು. ಆಗ ಈ ಹಿಂದಿದ್ದ ತಡೆಯಾಜ್ಞೆ ತೆರವುಗೊಳಿಸಿ ಸ್ಥಳೀಯ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಸೂಚಿಸಿದೆ ಎಂದರು.
ಹುಬ್ಬಳ್ಳಿ-ಅಂಕೋಲಾ ಉದ್ದೇಶಿತ ರೈಲು ಮಾರ್ಗ ಯೋಜನೆ ಸ್ಥಳದಿಂದ ಹುಲಿ ಸಂರಕ್ಷಿತ ವಲಯ 14 ಕಿ.ಮೀ ದೂರವಿದೆ ಎಂಬುದನ್ನು ಅರಣ್ಯ ಇಲಾಖೆಯೇ ಒದಗಿಸಿರುವ ಮಾಹಿತಿ ಸ್ಪಷ್ಟಪಡಿಸುತ್ತದೆ. ಆದರೆ ವೃಕ್ಷ ಎನ್ ಜಿಓ ಕೋರ್ಟ್ ನಲ್ಲಿ 7 ರಿಂದ 8 ಕಿ.ಮೀ ದೂರವಿದೆ. ಇದು ವನ್ಯಜೀವಿ ಹಾಗೂ ಪರಿಸರದ ನಾಶವಾಗಲು ಕಾರಣವಾಗಲಿದೆ ಎಂದು ಕೋರ್ಟ್ ಮುಂದೆ ವಾದವನ್ನು ಮಂಡಿಸಿತ್ತು. ಇದನ್ನು ವರದಿ ಸಮೇತ ರೈಲ್ವೆ ಸೇವಾ ಸಮಿತಿಯಿಂದ ಕೋರ್ಟ್ ಗೆ ಮನವರಿಕೆ ಮಾಡಲಾಗಿದೆ ಎಂದರು.
ಹುಬ್ಬಳ್ಳಿ-ಅಂಕೋಲಾ ಯೋಜನೆಯಿಂದ ಸಾಕಷ್ಟು ಉದೋಗ ದೊರೆಯಲಿದೆ. ವ್ಯಾಪಾರ ವಹಿವಾಟು ವೃದ್ದಿಸಲಿದೆ. ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆ ಅತ್ಯುತ್ತಮವಾಗಿದೆ ಎಂದು ಪ್ರತಿಪಾದಿಸಿದರು.
164 ಕಿ.ಮೀ ಉದ್ದದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಅಟಲ್ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ನೇರವೇರಿಸಿದರು. ಹುಬ್ಬಳ್ಳಿಯಿಂದ ಕಲಘಟಗಿವರೆಗೆ 34 ಕಿ.ಮೀ ರೈಲು ಮಾರ್ಗ ರಚನೆಯಾಗಿದೆ. ಈ ಹಂತದಲ್ಲಿ ನಾನಾ ಪರಿಸರ ಸಂಘಟನೆಗಳು ಕೋರ್ಟ್ ಮೋರೆ ಹೋಗಿ ಯೋಜನೆ ತಡೆಗೆ ಪ್ರಯತ್ನಿಸಿವೆ.
Kshetra Samachara
08/07/2022 07:21 pm