ಹುಬ್ಬಳ್ಳಿ: ತಾಲೂಕಿನ ನಾಗರಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡ ಕಾರಣ ಸಾರ್ವಜನಿಕರು ಕೆರೆ ನೀರನ್ನು ಸೇವಿಸುವ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದ್ದಾರೆ.
ಹೌದು ! ನಾಗರಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಎಲ್ಲೆಂದರಲ್ಲಿ ಅವ್ಯವಸ್ಥೆ ತಲೆದೋರಿದ್ದು, ಕಸ ಕಡ್ಡಿ ಬಿದ್ದು ವಿದ್ಯುತ್ ಬೋರ್ಡ್ ಸಹ ಹಾಳಾಗುತ್ತಿವೆ. ಕಳೆದ ಹಲವಾರು ದಿನಗಳಿಂದ ಶುದ್ಧ ಕುಡಿಯುವ ನೀರಿನ ಕೆಟ್ಟ ಪರಿಣಾಮ ನಿರ್ವಹಣೆ ಇಲ್ಲದ ಕೆರೆಯ ನೀರನ್ನೇ ಸಾರ್ವಜನಿಕರು ಸೇವನೆ ಮಾಡುತ್ತಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಅವ್ಯವಸ್ಥೆ ತಲುಪಿದ ದೃಶ್ಯಗಳನ್ನು ನಾಗರಹಳ್ಳಿ ಗ್ರಾಮದ ರಾಜಶೇಖರ್ ಎಂಬುವವರು ಪಬ್ಲಿಕ್ ನೆಕ್ಸ್ಟ್ ಕಳುಹಿಸಿ ಸಮಸ್ಯೆ ವಿವರಿಸಿದ್ದಾರೆ.
ಇತ್ತ ಕೆರೆ ನೀರು ಸಹ ಕಲುಷಿತವಾಗಿದ್ದು ಸಾರ್ವಜನಿಕರು ರೋಗದ ಭೀತಿ ಕಾಡತೊಡಗಿದೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಗಮನಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹಿಸುವಂತೆ ಮನವಿ ಮಾಡಿದ್ದಾರೆ.
Kshetra Samachara
29/06/2022 01:22 pm