ಹುಬ್ಬಳ್ಳಿ : ಅರೇ ರೇ ರೇ ರೇ ಇದ್ ಏನ್ರಪಾ ನೀರ್ ಹಿಂಗ್ ಧಬಾ ಧಬಾ ಹರಿಯಾಕತೈತಲ್ಲಾ ನಿನ್ನೇರ ಹುಬ್ಬಳ್ಯಾಗ ಮಳಿ ಆಗಿಲ್ಲ ಆದ್ರು ನೀರು ಹಿಂಗ್ ಜುಳು ಜುಳು ಹರಿಯಾಕತೈತಿ ಅಂದ್ರೆ ಎಲ್ಲಿಂದ ಬರಾಕತೈತಿ ಈ ನೀರು ಅಂತ ಹೆಚ್ಚ ವಿಚಾರ ಮಾಡಬ್ಯಾಡ್ರಿ..
ಇದ ನಮ್ಮ ಅಧಿಕಾರಿಗಳ ಅವೈಜ್ಞಾನಿಕ ಪ್ಲಾನಿಂಗ್ ನಿಂದಾದ ಎಡವಟ್ಟು ಮತ್ತ ಗುತ್ತಿಗೆದಾರನ ಬೇಜವಾಬ್ದಾರಿತನದಿಂದ ಬುಧವಾರ ರಾತ್ರಿ 2 ಗಂಟೆಯಿಂದ ಹುಬ್ಬಳ್ಳಿ ಬೈರಿಕೊಪ್ಪದ್ ರೇಣುಕಾನಗರದ ನೀರ ಹಿಂಗ್ ಹರಿಯಾಕತೈತಿ ನೋಡ್ರಿ..
ಅದರಾಗ್ ಇಲ್ಲಿ ಮನಿಗೆ 10 ದಿನಕ ಒಮ್ಮೆ ನೀರ್ ಬರತೈತಿ ಹಂತದ್ರಾಗ್ ಹಿಂಗ್ ನೀರ್ ರಸ್ತೆ ನ್ಯಾಗ್ ಹರದ್ರ ಇನ್ ತಿಂಗಳಿಗೆ ಒಮ್ಮೆ ಬಂದ್ರು ಡೌಟ್ ಇಲ್ಲ ಬಿಡ್ರಿ..
ಇನ್ನ ಇಲ್ಲಿನ ಮಂದಿ ಈ ನೀರ ಹರಿಯುವುದನ್ನು ನೋಡಿ ಯಾರಿಗ ಫೋನ್ ಮಾಡಬೇಕಲ್ಲಾ ಅವರಿಗೆ ಮಾಡಿದ್ರು ಯಾರು ಈಕಡೆ ನೋಡವಲ್ರು ಅಂತ ಇಲ್ಲಿ ಮಂದಿನ ಹೇಳಾಕತ್ತಾರ ನೋಡ್ರಿ ಇನ್ನರ್ ಜೀವ ಜಲ ಉಳಿಸು ಪ್ರಯತ್ನ ಮಾಡ್ರಿ…
ಇದು ವೀಕ್ಷಕ ವರದಿ
Kshetra Samachara
28/04/2022 02:01 pm