ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನೋಡಬನ್ನಿ ಕಾಂಗ್ರೆಸ್ (ಪಾರ್ಥೇನಿಯಂ) ಗಾರ್ಡನ್

ಈ ಗಾರ್ಡನ್‌ ಒಮ್ಮೆ ನೋಡಿ ಎಷ್ಟೊಂದು ವಿಶಾಲವಾದ ಜಾಗ ಇದೆ. ಸುಂದರ ಹೂವುಗಳಿಂದ ಕಂಗೊಳಿಸಬೇಕಿದ್ದ ಈ ಗಾರ್ಡನ್ ತುಂಬ ಇದೀಗ ಕಾಂಗ್ರೆಸ್ ಕಸ ಬೆಳೆದು ಕಾಂಗ್ರೆಸ್ ಗಾರ್ಡನ್ ಎಂಬ ಹೆಸರು ಪಡೆದಿದೆ.

ಹಾಗಿದ್ರೆ ಎಲ್ಲಿಯದು ಈ ಗಾರ್ಡನ್ ಅಂತೀರಾ? ಈ ಸ್ಟೋರಿ ನೋಡಿ. ಇದು ಧಾರವಾಡದ ಪುರೋಹಿತನಗರದಲ್ಲಿರುವ ಪಾಲಿಕೆ ಒಡೆತನದಲ್ಲಿರುವ ಗಾರ್ಡನ್. ವಿಶಾಲವಾದ ಜಾಗವನ್ನೂ ಹೊಂದಿದೆ. ಆದರೆ ಅಚ್ಚುಕಟ್ಟಾಗಿ ನಿರ್ವಹಣೆಯಾಗಬೇಕಿದ್ದ ಈ ಗಾರ್ಡನ್‌ ಇದೀಗ ಕಸ, ಕಡ್ಡಿಗಳಿಂದ ರಾರಾಜಿಸುತ್ತಿದೆ. ಅಲ್ಲದೇ ಗಾರ್ಡನ್ ತುಂಬ ಕಾಂಗ್ರೆಸ್ ಕಸ ಬೆಳೆದು ರೋಗ ಹಬ್ಬಿಸುವ ಗಾರ್ಡನ್ ಆಗಿ ಪರಿವರ್ತನೆಗೊಂಡಿದೆ.

ಹಳೆಯ ವಾರ್ಡ್ 18ರ ವ್ಯಾಪ್ತಿಗೆ ಈ ಗಾರ್ಡನ್ ಬರುತ್ತದೆ. ಗಾರ್ಡನ್‌ನಲ್ಲಿ ಸಮುದಾಯ ಭವನ ಕೂಡ ಇದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ಉದ್ಯಾನವನ ಸಂಪೂರ್ಣ ಸೊಳ್ಳೆಗಳನ್ನು ಉತ್ಪತ್ತಿ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ.

ಈ ಪುರೋಹಿತನಗರದ ರಸ್ತೆಗಳು ಸಹ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಹಾಗೂ ಉದ್ಯಾನವನ್ನು ಸರಿಪಡಿಸುವಂತೆ ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಪಾಲಿಕೆ ಸದಸ್ಯರು ಹಾಗೂ ಮೇಯರ್ ಈರೇಶ ಅಂಚಟಗೇರಿ ಅವರು ಈ ಸಮಸ್ಯೆಯತ್ತ ಬೆಳಕು ಚೆಲ್ಲಬೇಕಿದೆ.

- ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By :
Kshetra Samachara

Kshetra Samachara

09/06/2022 03:31 pm

Cinque Terre

14.21 K

Cinque Terre

0

ಸಂಬಂಧಿತ ಸುದ್ದಿ