ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಳೆಗೆ ಕೊಚ್ಚಿ ಹೋದ ರಸ್ತೆ ಸುಧಾರಣೆ ಯಾವಾಗ ಅಧಿಕಾರಿಗಳೇ !

ನಮಸ್ಕಾರೀ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ.. ನೀವೂ ಶಿರೂರನಿಂದ ಹಿರೆನೇರ್ತಿ ಬಸಾಪೂರ ಮಾರ್ಗದ ರಸ್ತೆ ಪರಿಸ್ಥಿತಿ ನೋಡಿರೋ ಇಲ್ಲೋ, ನೋಡಿಲ್ಲಾ ಅಂದ್ರ ದಯವಿಟ್ಟು ಹೋಗಿ ಒಮ್ಮೆ ನೋಡ್ರಿ.

ಹೌದು, ರೀ ಸಾಹೇಬ್ರೇ ಇದೇನೋ ರಸ್ತೆಯೋ, ಕೆರೆಯೋ, ಭೂ ಕುಸಿತವೋ ಅನ್ನೋ ರೀತಿ ಒಳಗೆ ರಸ್ತೆ ಅವ್ಯವಸ್ಥೆ ತುಲುಪಿ, ಜನರರು ನಿತ್ಯವೂ ತಾಲೂಕು ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳು ಮುಖ್ಯವಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕ್ತಾ ಜೀವ ಭಯದಲ್ಲಿ ಓಡಾಟ ನಡಸ್ಯಾರ.

ಈಗಾಗಲೇ ರಸ್ತೆ ತುಂಬಾ ತಗ್ಗು, ಗುಂಡಿ, ಕಲುಷಿತ ನೀರು ಸಂಗ್ರಹವಾಗಿ ಇದೊಂದು ರಸ್ತೆನಾ? ಈ ಹಿಂದೆ ಇದೇ ರಸ್ತೆ ಡಾಂಬರೀಕರಣ ಆಗಿತ್ತಾ? ಎನ್ನುವ ಸಂಶಯ ಜನರಲ್ಲಿ ಮೂಡಿ ರಸ್ತೆ ಒಂದೇಡೆ ಅರ್ಧಕರ್ಧ ಕೊಚ್ಚಿ ಹಳ್ಳದ ಪಾಲಾಗಿ ತಿಂಗಳು ಕಳೆದ್ರೂ ಸುಧಾರಣೆಗೆ ಹಿಡಿ ಮಣ್ಣು ಹಾಕಿಲ್ಲಂತ ಹೌದೇನ್ರಿ.

ನಿತ್ಯ ನಾಲ್ಕೈದು ಹಳ್ಳಿ ಜನರು, ಕೃಷಿ ಸಂಬಂಧಿತ ವಾಹನ, ಬೈಕ್ ಸವಾರರು ಇದೇ ರಸ್ತೆಯಲ್ಲಿ ಸಂಚಾರ ಮಾಡ್ತಾರ. ನಾಳೆ ರಭಸದ ಮಳೆ ಸುರಿದ್ರೆ ಸಂಪೂರ್ಣ ರಸ್ತೆ ಕೊಚ್ಚಿ ಹೋಗುವ ಆತಂಕ ಜನರನ್ನು ಕಾಡ್ತಾ ಇದೆ‌. ಮಾನ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಹೋಗ್ರಿ ರಸ್ತೆ ಪರಿಸ್ಥಿತಿ ನೋಡ್ರಿ ರೈತರ ಕಷ್ಟಕ್ಕೆ ಸ್ಪಂದನೆ ಕೊಡ್ರಿ.

Edited By :
Kshetra Samachara

Kshetra Samachara

20/06/2022 01:27 pm

Cinque Terre

17 K

Cinque Terre

0

ಸಂಬಂಧಿತ ಸುದ್ದಿ