ಇದೇ ವರ್ಷ ಏಪ್ರಿಲ್ ನಲ್ಲಿ ಪ್ರಾರಂಭವಾದ ನಲವಡಿ ಟೋಲ್ ನಾಕದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ.
ಇಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಯಾವುದೇ ರೀತಿಯ ಸೌಕರ್ಯಗಳು ಇರುವುದಿಲ್ಲ ಎಂದು ಇಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಆರೋಪ ಮಾಡುತ್ತಿದ್ದಾರೆ. ಶೌಚಾಲಯ ಕೊಠಡಿಗಳು ಇದ್ದರೂ ಬೀಗ ಜಡಿದಿರುತ್ತದೆ. ಕುಡಿಯಲು ನೀರು ಕೂಡ ಇರುವುದಿಲ್ಲ.
ಟೋಲ್ ನಾಕದ ಮುಂಭಾಗದಲ್ಲಿ ಭಾರಿ ಗಾತ್ರದ ವಾಹನಗಳು ನಿಲ್ಲುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಕಳೆದ ಹದಿನೈದು ದಿನಗಳಲ್ಲಿ ಎರಡು ಅಪಘಾತಗಳು ಸಂಭವಿಸಿವೆ. ಅಪಘಾತಗಳು ಸಂಭವಿಸುತ್ತಿದ್ದರೂ ಇಲ್ಲಿನ ಟೋಲ್ ನಾಕಾದ ಅಧಿಕಾರಿಗಳು ಮಾತ್ರ ನೋಡಿದರೂ ನೋಡದಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ಟೋಲ್ ನಾಕಾದ ಬಳಿ 4 ಹೈ ಮಾಸ್ಟ್ ಬಲ್ಪ್ ಗಳಿದ್ದರೂ ಎರಡನ್ನು ಮಾತ್ರ ಹಚ್ಚಿರುತ್ತಾರೆ. ಇದರಿಂದ ಅಪಘಾತಗಳು ಹೇರಳವಾಗಿ ಆಗುತ್ತದೆ ಎಂಬುದು ಅಕ್ಕ-ಪಕ್ಕ ಗ್ರಾಮದ ಗ್ರಾಮಸ್ಥರ ಅಭಿಪ್ರಾಯ.
ಇನ್ನಾದರೂ ತಾಲೂಕು ಮಟ್ಟದ ಅಧಿಕಾರಿಗಳು ಟೋಲ್ ನಾಕಾಗೆ ಭೇಟಿ ನೀಡಿ ಪ್ರಯಾಣಿಕರಿಗೆ ಒದಗಿಸಬೇಕಾದ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಪಬ್ಲಿಕ್ ನೆಕ್ಸ್ಟ್ ಕಡೆಯಿಂದ ಕಳಕಳಿಯ ವಿನಂತಿ.
ನಂದೀಶ್ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
09/06/2022 07:54 pm