ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ರಸ್ತೆ ಅಭಿವೃದ್ಧಿಗೆ ಬಂತು 25 ಲಕ್ಷ ಗ್ರಾಮಸ್ಥರು ಖುಷ್, ಕಷ್ಟ ಪರಿಹಾರ

ಕಳೆದ ಐವತ್ತು ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆ ದುರಸ್ತಿಗಾಗಿ ಇಲ್ಲೊಂದು ಗ್ರಾಮದ ಗ್ರಾಮಸ್ಥರು ಕೈಗೊಂಡ ಉಪವಾಸ ಸತ್ಯಾಗ್ರಹದ ನಿರ್ಧಾರಕ್ಕೆ ಕೊನೆಗೂ ಜಯ ಸಿಕ್ಕಿದೆ. ಈಗ ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಿಂದ ಯರಿನಾರಾಯಣಪೂರಕ್ಕೆ ಸಂಪರ್ಕ ಕಲ್ಪಿಸುವ ಮೂಲಕ 3 ಕಿಲೋ ಮೀಟರ್ ರಸ್ತೆಯ ಕಥೆ ಇದು. ಅವಳಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ತಾಲೂಕು ಆಡಳಿತ, ಶಾಸಕ, ಸಂಸದ ಹಾಗೂ ಸಚಿವರಿಗೆ ಮನವಿ ನೀಡಿ ಕೊನೆಗೆ ಉಪವಾಸ ಸತ್ಯಾಗ್ರಹದ ನಿರ್ಧಾರ ಕೈಗೊಮಡಿದ್ದರು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿ ರಸ್ತೆ ಅವ್ಯವಸ್ಥೆಯಿಂದ ಜನರು ಅನುಭವಿಸುತ್ತಿರುವ ಪರಿಸ್ಥಿತಿ ಬಗ್ಗೆ ಸತತ ವರದಿ ಪ್ರಕಟಿಸಿತ್ತು.

ಇದೀಗ ಗ್ರಾಮಸ್ಥರ ಹೋರಾಟದ ಪಬ್ಲಿಕ್ ವರದಿ ಫಲಶೃತಿಯಾಗಿ ಗುಡೇನಕಟ್ಟಿ ಯರಿನಾರಯಣಪುರಕ್ಕೆ ಜಿಲ್ಲಾ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯಡಿ 25 ಲಕ್ಷ ರೂಪಾಯಿ ಒದಗಿದ್ದು ಗ್ರಾಮಸ್ಥರು ಅಷ್ಟೇ ಖುಷಿಯಿಂದ ಕಾಮಗಾರಿ ಆರಂಭಿಸಿದ್ದಾರೆ.

ಒಟ್ಟಾರೆ ಕೃಷಿ ಚಟುವಟಿಕೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ, ತಹಶೀಲ್ದಾರ ಕಚೇರಿ ಇತರೆ ಕೆಲಸಗಳಿಗೆ ಸಮರ್ಪಕ ರಸ್ತೆ ಇಲ್ಲದೆ ಬೇರೆ ಮಾರ್ಗದಲ್ಲಿ ತೆರಳುತ್ತಿದ್ದ ಗುಡೇನಕಟ್ಟಿ ಯರಿನಾರಣಪೂರ ಜನತೆಗೆ ಕಷ್ಟ ದೂರವಾಗಿ ರಸ್ತೆ ಕಾಮಗಾರಿ ಭರದಿಂದ ಸಾಗಿದೆ.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/05/2022 12:41 pm

Cinque Terre

42.87 K

Cinque Terre

1

ಸಂಬಂಧಿತ ಸುದ್ದಿ