ಒಂದು ಕಡೆ ರಸ್ತೆಯ ಕಾಮಗಾರಿ… ಇನ್ನೊಂದಡೆ ಎಲ್ಲ ಚರಂಡಿಗಳು ತುಂಬಿ ಮನೆ, ಅಪಾರ್ಟ್ಮೆಂಟ್ ಒಳಗೆ ಚರಂಡಿ ನೀರು ನುಗ್ಗಿ ಜನರ ಪರದಾಟ. ಇಷ್ಟೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ವಾರ್ಡ್ ನಂಬರ್ 47 ರಲ್ಲಿ ಬರುವ ಲೋಕಪ್ಪನ ಹಕ್ಕಲದಲ್ಲಿ....
ಹೌದು….ಇಲ್ಲಿ ಮೊದಲಿನಿಂದಲೂ ರಸ್ತೆ ಇರಲಿಲ್ಲ. ಈಗ ಸಿಸಿ ರಸ್ತೆ ಮಾಡುತ್ತಿರುವುದರಿಂದ ಚರಂಡಿಯನ್ನು ಕೂಡ ಕಾಮಗಾರಿ ಮಾಡುತ್ತಿದ್ದಾರೆ. ಇದರಿಂದ ಚರಂಡಿ ಗುಂಡಿಗಳೆಲ್ಲವು ಬ್ಲಾಕ್ ಆಗಿ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ಚರಂಡಿ ನೀರು ರಸ್ತೆ ಮೇಲೆ ಅಷ್ಟೇ ಅಲ್ಲದೆ ಅಂಗಡಿ, ಮನೆ, ಅಪಾರ್ಟ್ಮೆಂಟ್ ಒಳಗೆ ನುಗ್ಗಿದ್ದರಿಂದ ಜನ ಪರದಾಡುತ್ತಿದ್ದಾರೆ. ಇಲ್ಲಿನ ನಿವಾಸಿಗಳು ರಸ್ತೆಯಲ್ಲಿ ನಿಂತು, ನಮಗೆ ಚರಂಡಿ ಸಮಸ್ಯೆಯನ್ನು ಬಗೆ ಹರಿಸಿಕೊಡಿ ಎಂದು ಜನನಾಯಕರಲ್ಲಿ, ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಸುಮಾರು ವರ್ಷಗಳಿಂದ ಇಲ್ಲಿ ರಸ್ತೆ ಇರಲಿಲ್ಲ. ಎರಡು ದಿನಗಳ ಹಿಂದೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಅವರು ಭೂಮಿ ಪೂಜೆ ಮಾಡಿದ್ದರು. ಹೊಸದಾಗಿ ಚರಂಡಿಯನ್ನು ನಿರ್ಮಾಣ ಮಾಡಿ ನಂತರ ರಸ್ತೆ ಮಾಡುತ್ತೇವೆ. ಮೊದಲಿಗೆ ರಸ್ತೆ ಮಾಡಿದ್ರೆ ಚರಂಡಿ ಸಮಸ್ಯೆ ಮತ್ತೆ ಬರುತ್ತದೆ. ಅದಕ್ಕಾಗಿ ಮೊದಲಿಗೆ ಸ್ವಲ್ಪಮಟ್ಟಿಗೆ ತೊಂದರೆ ಆಗುತ್ತದೆ. ಆದಷ್ಟು ಬೇಗ ಹೊಸದಾಗಿ ಚರಂಡಿ ಲೈನ್‌ನ್ನು ಮಾಡಿ, ರಸ್ತೆ ಮಾಡಿ ಕೊಡಲಾಗುತ್ತದೆಂದು ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಹೇಳುತ್ತಾರೆ. ಒಟ್ಟಿನಲ್ಲಿ ಆದಷ್ಟು ಬೇಗ ಇಲ್ಲಿನ ಜನರ ಸಮಸ್ಯೆಗಳನ್ನು ಬಗೆ ಹರಿಸಿ ನೆಮ್ಮದಿಯಾಗಿ ಜನ ಜೀವನ ನಡೆಸಲು ಅನುಕೂಲ ಮಾಡಿ ಕೊಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/08/2022 05:11 pm