ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಏನೋ ನಿಜ. ಆದರೆ ಇಲ್ಲಿನ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಇದೇನಾ ಅವಳಿನಗರ ಎನ್ನುವುದು ಖಂಡಿತ. ಇಲ್ಲಿನ ಜನರಿಗೆ ಸರಿಯಾದ ಮೂಲಭೂತ ಸೌಕರ್ಯಗಳು ಕೂಡ ದೊರೆಯುತ್ತಿಲ್ಲ. ಅಷ್ಟಕ್ಕೂ ಏನಿದು ಸಮಸ್ಯೆ ಅಂತೀರಾ ಈ ಸ್ಟೋರಿ ನೋಡಿ..
ಹುಬ್ಬಳ್ಳಿಯ ಭೈರಿದೇವರಕೊಪ್ಪದ ರೇಣುಕಾನಗರದ ಶ್ರೀ ಮಹರ್ಷಿ ವಾಲ್ಮೀಕಿ ಕಾಲೋನಿಯಲ್ಲಿ ಒಳ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಜನರು ದಿನವೂ ನರಕಯಾತನೆ ಅನುಭವಿಸುವಂತಾಗಿದೆ. ಈಗಾಗಲೇ ಇಲ್ಲಿನ ಜನರು ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಇಲ್ಲಿ ಯಾರು ಬಂದು ಅದನ್ನು ಸರಿಪಡಿಸುತ್ತಿಲ್ಲ. ಈಗಾಗಲೇ ಮಹಾನಗರ ಪಾಲಿಕೆಗೆ ಸಾಕಷ್ಟು ಸಲ ದೂರು ನೀಡಿದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ದೂರ ದೂರ ಓಡಾಡುತ್ತಾರೆ ವಿನಃ ಸಮೀಪಕ್ಕೆ ಸುಳಿಯುತ್ತಿಲ್ಲ.
ಇನ್ನೂ ಕುಡಿಯುವ ಮಲಪ್ರಭಾ ನೀರಿನಲ್ಲಿ ಒಳಚರಂಡಿ ನೀರು ಸೇರಿ ಬರುತ್ತಿದ್ದು, ಜನರು ಅನಿವಾರ್ಯವಾಗಿ ಇದೇ ನೀರನ್ನು ಕುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ದಿನಗಳಿಗೊಮ್ಮೆ ಬರುವ ನೀರಿನಲ್ಲಿ ಚರಂಡಿ ನೀರು ಸೇರಿಕೊಂಡು ಬರುವುದರಿಂದ ಕುಡಿಯಬೇಕೋ ಬಿಡಬೇಕೋ ಎಂಬುವಂತ ಸಮಸ್ಯೆ ಸುಳಿಯಲ್ಲಿ ಜನರು ಸಿಲುಕಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ಅಧಿಕಾರಿಗಳು ಜನರ ಸೇವೆ ಮಾಡಲು ಇದ್ದಾರೋ ಅಥವಾ ಜನಪ್ರತಿನಿಧಿಗಳ ಸೇವೆ ಮಾಡಲು ಇದ್ದಾರೋ ಒಂದು ಕೂಡ ಅರ್ಥವಾಗುತ್ತಿಲ್ಲ ಎಂದು ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/08/2022 04:52 pm