ಜಿಲ್ಲಾಧಿಕಾರಿಗಳೇ ನಿಮ್ಮ ಕಚೇರಿಯ ಶೌಚಾಲಯವನ್ನೊಮ್ಮೆ ನೋಡಿ ಎಂಬ ಶೀರ್ಷಿಕೆಯಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಿದ್ದ ವರದಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಪಂದಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ನೂತನ ಕಟ್ಟಡದಲ್ಲಿನ ಶೌಚಾಲಯ ಹಾಗೂ ಕೆಳಭಾಗದಲ್ಲಿರುವ ಶೌಚಾಲಯ ಸ್ವಚ್ಛತೆ ಕಾಣದೇ ಗಬ್ಬೆದ್ದು ನಾರುತ್ತಿದ್ದವು. ಶೌಚಾಲಯದಲ್ಲಿನ ಸಿಂಕ್ಗಳಂತೂ ತುಂಬಿಕೊಂಡು ಗಬ್ಬೆದ್ದು ನಾರುತ್ತಿದ್ದವು. ಈ ಸಂಬಂಧ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿದ ನಂತರ ಜಿಲ್ಲಾಧಿಕಾರಿಗಳು ಸಿಬ್ಬಂದಿಗೆ ಖಡಕ್ ಸೂಚನೆ ಕೊಟ್ಟು ಶೌಚಾಲಯವನ್ನು ಶುಚಿಗೊಳಿಸಿದ್ದಾರೆ.
Kshetra Samachara
27/06/2022 03:47 pm