ಐತಿಹಾಸಿಕ ಪುರಾತನ ದೇವಸ್ಥಾನಗಳಲ್ಲಿ ಒಂದಾದ ಅಣ್ಣಿಗೇರಿ ಪಟ್ಟಣದ ಶ್ರೀ ಅಮೃತೇಶ್ವರ ದೇವಸ್ಥಾನದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? 1054 ರಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಇದು ಭಾರತ ಪುರಾತತ್ವ ಸಂರಕ್ಷಣಾ ಇಲಾಖೆಗೆ ಒಳಪಟ್ಟಿರುತ್ತದೆ.
ಇಲ್ಲಿ ರಾಜ್ಯದ ನಾನಾ ಭಾಗಗಳಿಂದ ಹಾಗೂ ಬೇರೆ ರಾಜ್ಯಗಳಿಂದ ಭಕ್ತರು ಇಲಿ ಬರುತ್ತಾರೆ.ಆದರೆ ಯಾಕೋ ಏನೋ ಗೊತ್ತಿಲ್ಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ದೇವಸ್ಥಾನದ ಪ್ರಧಾನ ಧರ್ಮದರ್ಶಿ ಲಿಂಗರಾಜ ಕುಲಕರ್ಣಿಯವರು ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಮನದಾಳದ ಮಾತುಗಳು ಹಂಚಿಕೊಂಡರು.
ಪ್ರವಾಸಿಗರು ಇಲ್ಲಿ ಬಂದರೆ ಅವರಿಗೆ ಉಳಿದು ಕೊಳ್ಳಲು ಯಾತ್ರಿ ನಿವಾಸ ಇರುವುದಿಲ್ಲ. ಕುಡಿಯುವ ನೀರು,ಶೌಚಾಲಯ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಾಚೀನ ವಸ್ತುಗಳು ಇರುತ್ತವೆ ಅವುಗಳನ್ನು ಒಂದು ಕಡೆ ಜೋಡಿಸಲು ಹಾಗೂ ಪ್ರವಾಸಿಗರಿಗೆ ತೋರಿಸಲು ಪ್ರಾಚೀನ ವಸ್ತು ಸಂಗ್ರಹಾಲಯ ಬೇಕಾಗಿರುತ್ತದೆ.
ಬೇರೆ ಸ್ಥಳಗಳಿಂದ ಭಕ್ತರು ದೇವಸ್ಥಾನಕ್ಕೆ ಬರಬೇಕಾದರೆ ಸಾರ್ವಜನಿಕರನ್ನು ಕೇಳಿಕೊಂಡು ರಸ್ತೆ ಹುಡುಕೊಂಡು ಬರುವಂಥ ಪರಿಸ್ಥಿತಿ ಬಂದಿದೆ. ಸರಿಯಾದ ನಾಮಪಲಕಗಳು ಇರುವುದಿಲ್ಲ. ಇನ್ನೂ ಮಳೆ ಬಂತೆಂದರೆ ಸಾಕು ದೇವಸ್ಥಾನದ ಆವರಣದ ತುಂಬೆಲ್ಲ ನೀರು ನಿಲ್ಲುತ್ತದೆ. ಈ ವಿಷಯವಾಗಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಪ್ರಾಚೀನ ಇತಿಹಾಸವಿರುವ ಶ್ರೀ ಅಮೃತೇಶ್ವರ ದೇವಸ್ಥಾನವನ್ನು ಮೇಲ್ದರ್ಜೆಗೇರಿಸಲು ಗಮನ ಹರಿಸಬೇಕೆಂದು ಧರ್ಮದರ್ಶಿಗಳು ಒತ್ತಾಯಿಸಿದರು.
ವಿಶೇಷ ವರದಿ ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
26/05/2022 03:53 pm