ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ತಾಲೂಕಿನ ವಿವಿಧ ಹಳ್ಳಿಗಳಿಗೆ ಜಿಪಂ ಸಿಇಒ ಭೇಟಿ ಪರಿಶೀಲನೆ

ತಾಲೂಕಿನ ವಿವಿಧ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸುರೇಶ್ ಇಟ್ನಾಳ ಅವರು ಭೇಟಿ ನೀಡಿ ಈಗಾಗಲೇ ಗ್ರಾಮದಲ್ಲಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಹೌದು ! ಕುಂದಗೋಳ ತಾಲೂಕಿನ ಯಲಿವಾಳಕ್ಕೆ ಗ್ರಾಮಕ್ಕೆ ಭೇಟಿ ನೀಡಿ ಡಿಜಿಟಲ್ ಲೈಬ್ರರಿ ಪರಿಶೀಲನೆ ನಡೆಸಿದ ಅವರು, ಕುಬಿಹಾಳ ಗ್ರಾಮದಲ್ಲಿ ಸ್ವಚ್ಚ ಭಾರತ್ ಮಷಿನ್ ಯೋಜನೆಯಡಿ ತಯಾರಾದ ತ್ಯಾಜ್ಯ ವಿಲೇವಾರಿ ಘಟಕ ವೀಕ್ಷಣೆ ಮಾಡಿದರು.

ಕುಂದಗೋಳ ತಾಲೂಕಿನ ಎಲ್ಲಾ ಶಾಲೆಗಳ ಆಟದ ಮೈದಾನ ಕಾಂಪೌಂಡ್, ಗೋಡೆ, ಭೋಜನಾಲಯ ಅನುಷ್ಠಾನಕ್ಕೆ ಸೂಚಿಸಿದರು. ಅದರಂತೆ ಜಲ ಜೀವನ್ ಮಷಿನ್ ಕಾಮಗಾರಿಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುರಿಯವರ, ನರೇಗಾ ಸಹಾಯಕ ನಿರ್ದೇಶಕ ಅಜಯ್,ಎನ್. ಪಿಡಿಓ ಬಸವರಾಜ ಬಾಗಲ, ನಾಗಾರಾಜ್ ಉಳ್ಳೇಸೂರ, ಇತರೆ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

05/04/2022 01:18 pm

Cinque Terre

17.56 K

Cinque Terre

0

ಸಂಬಂಧಿತ ಸುದ್ದಿ