ವಾಣಿಜ್ಯನಗರಿ ಹುಬ್ಬಳ್ಳಿಯ ಕೇಶ್ವಾಪೂರ ರಸ್ತೆಯಲ್ಲಿರುವ ನವೀನ್ ಪಾರ್ಕ್ ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕರ್ನಾಟಕ ಬ್ಯಾಂಕ್ 887ನೇ ಶಾಖೆ ಹಾಗೂ ಮಿನಿ ಇ-ಲಾಬಿ ಉದ್ಘಾಟನೆಯನ್ನು ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ವಿ.ಎಸ್.ವಿ ಪ್ರಸಾದ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಬಳಿಕ ಎಟಿಎಂ ಘಟಕಕ್ಕೆ ಚಾಲನೆ ನೀಡಿ ಮೊದಲ ಪ್ರಾಯೋಗಿಕ ತಪಾಸಣೆ ನಡೆಸಿ ಎಟಿಎಂ ಮೂಲಕ ಹಣವನ್ನು ಡ್ರಾ ಮಾಡಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕ ಕೇಶವ ಕೃಷ್ಣರಾವ್ ದೇಸಾಯಿಯವರು ಸಾಥ್ ನೀಡಿದರು. ಇನ್ನೂ ಕರ್ನಾಟಕ ಬ್ಯಾಂಕ್ ವತಿಯಿಂದ ಡಾ.ವಿ.ಎಸ್.ವಿ ಪ್ರಸಾದ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ನವೀನ್ ಪಾರ್ಕ್ ನಲ್ಲಿ ಆರಂಭಗೊಂಡಿರುವ ಕರ್ನಾಟಕ ಬ್ಯಾಂಕ್ ಶಾಖೆ ಉತ್ತಮ ಸೇವೆ ನೀಡುವ ಮೂಲಕ ಜನಮನ್ನಣೆ ಪಡೆಯಲಿ ಎಂದು ಡಾ.ವಿ.ಎಸ್.ವಿ ಪ್ರಸಾದ್ ಶುಭ ಹಾರೈಸಿದರು.
ಒಟ್ಟಿನಲ್ಲಿ ಗ್ರಾಹಕರಿಗೆ ಗುಣಮಟ್ಟದ ಬ್ಯಾಂಕ್ ಸೇವೆ ನೀಡುವ ಸದುದ್ದೇಶದಿಂದ ನಿರ್ಮಾಣಗೊಂಡ 887ನೇ ಶಾಖೆಯು ಉತ್ತಮ ರೀತಿಯಲ್ಲಿ ಕಾರ್ಯಾರಂಭ ಮಾಡಿದೆ. ಅದೇ ರೀತಿ ಜನರಿಗೆ ಉತ್ಕೃಷ್ಟ ಗುಣಮಟ್ಟದ ಸೇವೆ ನೀಡಲಿ ಎಂಬುವುದು ನಮ್ಮ ಆಶಯ.
Kshetra Samachara
31/03/2022 03:37 pm