ಅಣ್ಣಿಗೇರಿ : ರಸ್ತೆ ಮೇಲೆ ಹರಿಯುವ ಕೊಳಚೆ ನೀರು, ಸೊಳ್ಳೆಗಳ ಕಾಟ, ನಿತ್ಯ ದುರ್ವಾಸನೆಯಲ್ಲೇ ಬದುಕುವ ಜನರ ತಾಪತ್ರಯಗಳಿಗೆ ಬೆಲೆ ಕೊಡದೆ ಕಚೇರಿಗಳಲ್ಲೇ ಬೆಚ್ಚಗೆ ಮಲಗಿರೋ ಅಧಿಕಾರಿಗಳು ಈ ಭದ್ರಾಪೂರದ ಗ್ರಾಮದ ದುಸ್ಥಿತಿ ಏನು ಹೇಳ್ಬೇಕು ನೀವೆ ಹೇಳಿ.
ಇದೋ ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದ ಓಣಿಗಳ ದುಸ್ಥಿತಿ ನೋಡಿ. ಈ ಸರ್ಕಾರದಿಂದ ಹಣ ಮಂಜೂರಾಗಿದ್ದೆ ತಡ ಈ ಅಧಿಕಾರಿಗಳು ಜನರಿಗೆ ಸೂಕ್ತ ಚರಂಡಿ ಭಾಗ್ಯ ಕಲ್ಪಿಸದೆ, ಡೈರೆಕ್ಟ್ ರಸ್ತೆ ಮಾಡಿಸಿ ತಮ್ಮ ಹಣ ತೆಗೆದುಕೊಂಡು ಕೈ ತೊಳಕ್ಕುಂಡ ಬಿಡ್ತಾರೆ. ಆದ್ರೆ ಆ ರಸ್ತೆ ನಿರ್ಮಾಣದ ನಂತರ ಜನರು ಬಳಸಿದ ನೀರು ರಸ್ತೆ ಮೇಲೆ ಸಂಗ್ರಹವಾಗಿ ಉಂಟಾಗುವ ಸಮಸ್ಯೆಗಳಿಗೆ ಯಾರು ಸ್ಪಂದಿಸೋದಿಲ್ಲ.
ಈ ಕಾರಣ ಭದ್ರಾಪೂರ ಗ್ರಾಮಗಳ ಓಣಿಗಳ ಮೇಲೆ ನಿತ್ಯ ಹರಿಯುವ ಕೊಳಚೆ ನೀರಿಗೆ ಮಾರ್ಗ ಸಿಕ್ಕಿಲ್ಲಾ. ಈ ಅವ್ಯವಸ್ಥೆಗೆ ಹಳ್ಳಿಗರ ಬದುಕು ರೋಗಕ್ಕೆ ಸಿಲುಕಿದ್ದು, ಅಧಿಕಾರಿಗಳಿಗೆ ನಿತ್ಯ ಹಿಡಿ ಶಾಪ ಹಾಕಿದ್ರೂ, ಯಾರು ಈ ಸಮಸ್ಯೆ ಆಲಿಸಿಲ್ಲ. ಇನ್ನೂ ಅಧಿಕಾರ ಕಳೆದುಕೊಂಡ ಸುಮ್ಮನಿರೋ ಪಂಚಾಯ್ತಿ ಸದಸ್ಯರಿಗೂ ಇದು ಸಂಬಂಧವೇ ಇಲ್ಲಾ. ಹೀಗಾಗಿ ಜನರ ಬದುಕು ನರಕವಾಗಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಬೇಕಿದೆ.
Kshetra Samachara
19/11/2020 08:38 pm