ಅಣ್ಣಿಗೇರಿ : ಇದೇನ್ರೀ ಈ ಮುಳ್ಳು ಕಂಟಿ ಒಳಗೆ ಯಾರು ಅಂಗನವಾಡಿ ಅಂಗನವಾಡಿ ಕೇಂದ್ರ ಕಟ್ಟಿಸಿದ್ದಾರೆ ? ಮಕ್ಕಳು, ಮಹಿಳೆಯರು ಈ ಅಂಗನವಾಡಿ ಟೀಚರ್ ಆದ್ರೂ ಬರೋದು ಹೇಗೆ ? ಅಂದ್ರಾ. ಏನಿಲ್ಲಾ ಸ್ವಾಮಿ ಈ ಅಂಗನವಾಡಿ ಕಟ್ಟಡ ಕಟ್ಟಿದ ನಂತರವೇ ಇಲ್ಲಿ ಈ ರೀತಿ ಅಂಗನವಾಡಿಗೆ ದಾರಿನೇ ಇಲ್ಲದ ಹಾಗೇ ಮುಳ್ಳು ಕಂಟಿ ಬೆಳೆದು ಅವ್ಯವಸ್ಥೆ ಎದ್ದು ತೋರುತ್ತಿದೆ.
ಈ ಅಂಗನವಾಡಿ ಇರೋದು ಈ ಅಣ್ಣಿಗೇರಿ ಪಟ್ಟಣದ ಹಳೆಯ ಅಮೃತೇಶ್ವರ ನಗರದಲ್ಲಿ ಈ ಅಂಗನವಾಡಿಗೆ ಸರ್ಕಾರ ನೀಡೊ ಪೌಷ್ಟಿಕ ಆಹಾರ ಪದಾರ್ಥ ಪಡೆಯೋಕೆ ಗರ್ಭಿಣಿ ಬಾಣಂತಿಯರು ಬರಲು ಹರಸಾಹಸ ಪಡ್ಬೇಕು, ಇನ್ನು ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆ ಇದ್ರಂತೂ ಮುಗಿದೆ ಹೋಯ್ತು, ಅಂಗೈಯಲ್ಲಿ ಜೀವ ಹಿಡಿದು ಎಳೆ ಕಂದಮ್ಮಗಳನ್ನ ಕರೆ ತರಬೇಕು.
ಈ ಬಗ್ಗೆ ಇಲ್ಲಿನ ನಿವಾಸಿಗಳು ಪುರಸಭೆಗೆ ತಿಳಿಸಿದ್ರೂ ಈ ಅಧಿಕಾರಿಗಳು ನಿದ್ರೆಗೆ ಜಾರಿದ ಕಾರಣ ಪರಿಹಾರ ನಿರ್ವಹಣೆ ಕಂಡಿಲ್ಲ, ಇನ್ನು ಈ ಅಂಗನವಾಡಿ ಕಟ್ಟಡಕ್ಕೆ ಹೊಂದಿಕೊಂಡಿರುವ ಚರಂಡಿ ಬಾಯ್ತೆರೆದಿದ್ದು, ವಿಪರೀತ ಗಲೀಜು ಕೊಳಚೆ ತುಂಬಿ ಅಲ್ಲಿನ ನಿವಾಸಿಗಳಿಗೆ ರೋಗ ಭೀತಿ ಎದುರಾಗಿದೆ ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಬೇಕಿದೆ.
Kshetra Samachara
16/11/2020 02:12 pm