ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್: ಈರಣ್ಣ ವಾಲಿಕಾರ
ಹುಬ್ಬಳ್ಳಿಯಲ್ಲಿ ಪ್ರತಿಯೊಂದು ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಗಳ ಹಾವಳಿ ಹೆಚ್ಚಾಗಿದ್ದು, ಪ್ರಯಾಣಿಕರು ಯಾವ ಸಿಗ್ನಲ್ ನ್ನು ನೋಡಿ ವಾಹನ ಚಲಾಯಿಸಬೇಕೆಂದು ಗೊಂದಲಕ್ಕೆ ಇಡಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಂಪೂರ್ಣವಾಗಿ ವರದಿಯನ್ನು ಬಿತ್ತರಿಸಿತ್ತು. ಸದ್ಯ ನಮ್ಮ ವರದಿಯನ್ನು ನೋಡಿದ ಅಧಿಕಾರಿಗಳು ಈಗ ಚಾಲನೆ ಇಲ್ಲದ ಸಿಗ್ನಲ್ ಗಳನ್ನು ತೆರವುಗೋಳಿಸಲು ಮುಂದಾಗಿದ್ದಾರೆ.
ಒಂದೊಂದು ಕಡೆ ಇಷ್ಟೊಂದು ಸಿಗ್ನಲ್ ನಾವು ಯಾವುದನ್ನು ನೋಡಬೇಕು" ಎಂಬ ಶೀರ್ಷಿಕೆಯಲ್ಲಿ, ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಪ್ರಕಟಿಸಿತು. ವಾಹನ ಚಾಲಕರಿಗೆ ಸಿಗ್ನಲ್ ಗಳ ಗೊಂದಲ ಹೆಚ್ಚಾಗಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ವರದಿಯನ್ನು ಮಾಡಿದ ಕೂಡಲೆ ಸಂಬಂಧಿಸಿದ ಅಧಿಕಾರಿಗಳು. ಹೆಚ್ಚಿನ ರೀತಿಯಲ್ಲಿ ಇದ್ದಂತಹ ಸಿಗ್ನಲ್ ಗಳನ್ನು ಇಂದು ತೆರುವುಗೋಳಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
09/11/2020 06:41 pm