ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಂಡ ಹಾಕ್ತಿರಾ ನಿಜಾ! ಆದರೆ ಮೂಲಭೂತ ಸೌಕರ್ಯ ಎಲ್ಲಿ? ಅಧಿಕಾರಿಗಳಿಗೆ ಸಾರ್ವಜನಿಕರ ಪ್ರಶ್ನೆ

ವರದಿ:ಈರಣ್ಣ ವಾಲಿಕಾರ

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿ ನಿತ್ಯ ಬೆಳೆಯುತ್ತಿದೆ. ಅದರಂತೆ ವಾಹನ ದಟ್ಟಣೆಯೂ ಕೂಡ ಹೆಚ್ಚಾಗುತ್ತಿದೆ. ಆದ್ರೆ ಅದಕ್ಕೆ ತಕ್ಕಂತೆ ಫುಟ್ ಪಾತ್, ಜಿಬ್ರಾ ಕ್ರಾಸಿಂಗ್ ಹಾಗೂ ಮೇಲ್ಸೆತುವೆ ಕೊರತೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿವೆ....

ವಾಣಿಜ್ಯ ನಗರಿಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ, ಪೊಲೀಸ್ ಇಲಾಖೆ ಎಡವಿದ್ದು ಎದ್ದು ಕಾಣುತ್ತಿದೆ. ನಗರದ ಪ್ರಮುಖ ರಸ್ತೆಗಳ ಜಿಬ್ರಾ ಕ್ರಾಸಿಂಗ್ ಮಾಸಿಹೋಗಿವೆ. ಇನ್ನು ಕೆಲವು ಕಡೆ ಜಿಬ್ರಾ ಕ್ರಾಸಿಂಗ್ ಇಲ್ಲ. ಇದ್ದರೂ ಅವುಗಳ ಬಳಕೆ ಸಾಧ್ಯವಾಗುತ್ತಿಲ್ಲ. ಸಂಚಾರ ದಟ್ಟಣೆ ಹಾಗೂ ವಾಹನ ಸವಾರರ ಸಂಚಾರ ನಿಯಮ ಕೊರತೆಯಿಂದ ಅಪಘಾತಗಳು ಸಂಭವಿಸಿವೆ. ನಗರದಲ್ಲಿ ಮುಖ್ಯ ಟ್ರಾಫಿಕ್ ಸಿಗ್ನಲ್ಗಳು ದುರಸ್ತಿಯಲ್ಲಿರುವುದರಿಂದ, ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ....

ನಗರದ ಪ್ರಮುಖ ಸ್ಥಳಗಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವದು ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿವೆ. ಕಾರು ಹಾಗೂ ಬೈಕ್ ಗಳನ್ನು ಸಾರ್ವಜನಿಕರು ನಡೆದಾಡುವ ಪುಟ್ ಪಾತ್ ಮೇಲೆ ನಿಲ್ಲಿಸಲಾಗುತ್ತಿದೆ. ಇದರಿಂದ ಪಾದಚಾರಿಗಳು ರಸ್ತೆ ಮೇಲೆ ಓಡಾಡುವದರಿಂದ ಪಾದಾಚಾರಿಗಳು ಅಪಘಾತಕ್ಕೆ ಒಳಗಾಗುತ್ತಿದ್ದಾರೆ...

ಹೆಲ್ಮೆಟ್ ಇಲ್ಲ, ಸಿಟ್ ಬೆಲ್ಟ್ ಇಲ್ಲ ಎಂದು ದಂಡ ಹಾಕುವ ಪೊಲೀಸರು, ರಸ್ತೆ ನಿಯಮ ಪಾಲನೆ ಜಾಗೃತಿ ಹಾಗೂ ಮೂಲಭೂತ ಸೌಕರ್ಯಗಳತ್ತ ಗಮನಹರಿಸಿ, ಯಾವುದೇ ಅಪಘಾತಗಳು ಜರುಗದಂತೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.......!

Edited By : Manjunath H D
Kshetra Samachara

Kshetra Samachara

02/11/2020 12:12 pm

Cinque Terre

49.6 K

Cinque Terre

22

ಸಂಬಂಧಿತ ಸುದ್ದಿ