ಹುಬ್ಬಳ್ಳಿ: ಆ ನಗರದಲ್ಲಿ ರಸ್ತೆಗಳೆ ಕಣ್ಮರೆಯಾಗಿದೆ. ರಸ್ತೆಯಲ್ಲಿ ಗುಂಡಿಯೋ ಗುಂಡಿಯಲ್ಲಿ ರಸ್ತೆಯೋ ಎನ್ನುವ ಸ್ಥಿತಿಯಿದೆ. ಹದಗೆಟ್ಟ ರಸ್ತೆಯಿಂದ ಹೊರಹೊಮ್ಮತ್ತಿದ್ದು ಜನರ ಪ್ರಾಣ ಹಿಂಡುತ್ತಿದ್ರೆ, ಜನರು ಹಿಡಿಶಾಪ ಹಾಕಿದರು ಎಚ್ಚೆತ್ತುಕೊಳ್ಳುತ್ತಿಲ್ಲ ಅಧಿಕಾರಿಗಳು, ಅಷ್ಟಕ್ಕೂ ಅದು ಯಾವ ರಸ್ತೆ ಅಂತೀರಾ ಹಾಗಿದ್ದರೆ ಈ ಸ್ಟೋರಿ ನೋಡಿ.
ಎಲ್ಲಿ ನೋಡಿದರಲ್ಲಿ ಗುಂಡಿಗಳು, ಕಣ್ಣಿಗೆ ಕಾಣದ ರಸ್ತೆ, ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿರುವ ವಾಹನ ಸವಾರರು, ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ ನಗರದ ಪ್ರತಿಷ್ಠಿತ ಸಿದ್ದಾರೂಢರ ಮಠಕ್ಕೆ ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವ ಗಣೇಶ ನಗರದಲ್ಲಿ, ಅವ್ಯವಸ್ಥೆಯಿಂದ ಕೂಡಿರುವ ರಸ್ತೆಗಳ ಕರ್ಮಕಾಂಡ. ಇನ್ನು ಬೇಸಿಗೆ ಕಾಲದಲ್ಲಿ ಧೂಳಿನಿಂದ ಕಂಗೆಟ್ಟಿರುವ ಜನತೆ, ಈಗ ಮಳೆಗಾಲದಲ್ಲಿ ಗುಂಡಿಗಳ ಅವ್ಯವಸ್ಥೆಯಿಂದ ಮತ್ತಷ್ಟು ರೊಚ್ಚಿಗೇಳುವ ಹಾಗೆ ಮಾಡಿದೆ.
ಕಳೆದ ಮೂರು ವರ್ಷಗಳಿಂದ ಇಲ್ಲಿನ ನಿವಾಸಿಗಳು, ಅದೆಷ್ಟೋ ಬಾರಿ ಗುಂಡಿಗಳನ್ನು ಮುಚ್ಚುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ, ಯಾವುದೇ ಪ್ರಯೋಜನವಾಗಿಲ್ಲ. ಇನ್ನು ರಸ್ತೆ ಮೇಲೆ ಮಕ್ಕಳು ಹಾಗೂ ವೃದ್ಧರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಪ್ರಸಂಗ ಬಂದೊದಗಿದೆ. ಅಷ್ಟೇ ಅಲ್ಲದೆ, ಈ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಿಕೊಂಡು ಬರುವುದೇ ದೊಡ್ಡ ಸಾಹಸ ವಾಗಿದೆ. ಇಂತಹ ರಸ್ತೆ ಮೇಲೆ ವಾಹನ ಚಲಾಯಿಸಿದ್ರೇ ಗ್ಯಾರೇಜ್ ಗೆ ಬಿಡುವುದು ಗ್ಯಾರಂಟಿ. ಆದಷ್ಟು ಬೇಗ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೇ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ರಸ್ತೆ ಸಮಸ್ಯೆಯಿಂದಾಗಿ ಜನತೆ ಜನಪ್ರತಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು ಸಹ ಕ್ಯಾರೆ ಎನ್ನುತ್ತಿಲ್ಲ, ಆದ್ದರಿಂದ ಕೂಡಲೇ ಗುಂಡಿಗಳ ಸಮಸ್ಯೆ ಬಗೆಹರಿಸುವ ಮೂಲಕ ಉತ್ತಮ ರಸ್ತೆ ನಿರ್ಮಾಣ ಮಾಡಿ ಹುಬ್ಬಳ್ಳಿ ಜನತೆ ಸಂಕಷ್ಟಕ್ಕೆ ನಾಂದಿ ಹಾಡಬೇಕಿದೆ.....!
Kshetra Samachara
25/10/2020 04:08 pm