ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕುಂದಗೋಳದ ಕೆರೆಗಳಿಗೆ ಸಿಕ್ತು ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಸ್ವಚ್ಛತಾ ಭಾಗ್ಯ

ಕುಂದಗೋಳ : ಕುಂದಗೋಳ ಪಟ್ಟಣದ 22.30 ಲಕ್ಷ ಸುರಿದ್ರೂ ಅಭಿವೃದ್ಧಿಯಾಗದ ಕೆರೆಯಂಗಳ ಹಾಗೂ ಸ್ಥಳೀಯರಿಗೆ ಹಾವು ಚೇಳಿನ ಭೀತಿ ಜೊತೆ ರೋಗದ ಭಯ ತಂದೊಡ್ಡಿದ್ದ ತೋರಣಗಟ್ಟಿ ಕೆರೆ ಹಾಗೂ ಐತಿಹಾಸಿಕ ಅಗಸಿಹೊಂಡದ ಅವ್ಯವಸ್ಥೆಗಳ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮೂರು ವಿಶೇಷ ವರದಿ ಪ್ರಕಟಿಸಿತ್ತು.

ಆ ಮೂಲಕ ಕೆರೆಗಳ ಉಳಿವಿಕೆ ಹಾಗೂ ಅವುಗಳ ಅಭಿವೃದ್ಧಿ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದಿತ್ತು.

ಸದ್ಯ ನಮ್ಮ ವರದಿಗಳ ಬಳಿಕ ಎಚ್ಚೆತ್ತುಕೊಂಡಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈಗಾಗಲೇ ತೋರಣಗಟ್ಟಿ ಕೆರೆಯನ್ನು ಜೆಸಿಬಿ ಯಂತ್ರದ ಮೂಲಕ ಚರಂಡಿ ಹಾಗೂ ಅಲ್ಲಿನ ಅವ್ಯವಸ್ಥೆ ಸರಿಪಡಿಸಿದ್ದು ಅಗಸಿಹೊಂಡದ ಕೆರೆಯ ಸುತ್ತ ಕ್ರಿಮಿನಾಶಕ ಸಿಂಪಡಣೆ ಮಾಡಿ ಕೆರೆಯಂಗಳ ಸುತ್ತಲಿನ ಬೀದಿ ದೀಪ ಹಾಕಲು ಒಪ್ಪಿಗೆ ಸೂಚಿಸಿದೆ.

ತೋರಣಗಟ್ಟಿ ಕೆರೆ ಕಸ ತ್ಯಾಜ್ಯ ವಸ್ತುಗಳನ್ನ ಎಸೆಯದಂತೆ ಬಸ್ ನಿಲ್ದಾಣ ಸಾರಿಗೆ ನಿರ್ವಾಹಕರು ಹಾಗೂ ವ್ಯಾಪಾರಿಗಳಿಗೆ ನೋಟಿಸ್ ಕೂಡಾ ಜಾರಿ ಮಾಡಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

22/10/2020 05:37 pm

Cinque Terre

40.48 K

Cinque Terre

8

ಸಂಬಂಧಿತ ಸುದ್ದಿ