ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೀಳುವ ಹಂತದಲ್ಲಿದೆ ಶಾಲೆ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ

ಹುಬ್ಬಳ್ಳಿ- ಅದು ಶತಮಾನ ಕಂಡಿರುವ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ. ಆ ಶಾಲೆ ಗೋಡೆಗಳು ಶಿಥಿಲಗೊಂಡು ಬಿಳ್ಳುವ ಹಂತಕ್ಕೆ ತಲುಪಿದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅಷ್ಟಕ್ಕೂ ಆ ಶಾಲೆ ಪರಿಸ್ಥಿತಿ ಹೇಗಿದೆ ಎಂಬುದನ್ನಾ ತೋರಸ್ತೇವಿ ನೋಡಿ....

ಹೌದು.. ಹೀಗೆ ಶಿಥಿಲಗೊಂಡಿರುವ ಕಟ್ಟಡ... ಪಕ್ಕದಲ್ಲೇ ಮಕ್ಕಳ ಆಟ.. ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹಳೇ ಹುಬ್ಬಳ್ಳಿಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ನಂಬರ್ ಒನ್ ಶಾಲೆಯ ಪರಿಸ್ಥಿತಿ ಇದು. ಈ ಶಾಲೆಯನ್ನು 70 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಈಗ ಅದು ಶೀಥಿಲಾವಸ್ಥೆಗೆ ತಲುಪಿದ್ದು ಇಂದೋ ನಾಳೆಯೋ ಬೀಳ್ಳುವ ಸ್ಥಿತಿಗೆ ತಲುಪಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಇನ್ನೊಂದು, ವಿಶೇಷ ಅಂದರೇ ಈ ಶಾಲೆಯಲ್ಲಿ ಶ್ರೀ ಸದ್ಗುರು ಸಿದ್ಧರೂಢರ ಪರಮ ಶಿಷ್ಯ ಗುರುನಾಥರೂಢರು ಸಹ ಇಲ್ಲೆ ಕಲಿತಿದ್ದಾರೆ. ಇನ್ನೂ ಇಷ್ಟೆಲ್ಲಾ ಸಮಸ್ಯೆ ಗೊತ್ತಿದ್ರೂ ಸಹ ಅಧಿಕಾರಿಗಳು ಯಾಕೆ ಈ ಕಟ್ಟಡ ತೆರವುಗೊಳಿಸುತ್ತಿಲ್ಲ. ಆದ್ದರಿಂದ ಕೂಡಲೇ ಕಟ್ಟಡ ತೆರವು ಮಾಡಬೇಕು ಎಂಬುದು ಶಿಕ್ಷಕರು ಮತ್ತು ಮಕ್ಕಳ ಒತ್ತಾಯವಾಗಿದೆ.

ಅಷ್ಟೇ ಅಲ್ಲದೆ ಈ ಕಟ್ಟಡ ಅವ್ಯವಸ್ಥೆ ಇದ್ದು, ಪಕ್ಕದಲ್ಲೇ ಹೊಸ ಕಟ್ಟಡ ನಿರ್ಮಿಸಲಾಗಿದೆ. ಹೊಸ ಕಟ್ಟಡದಲ್ಲಿ ಸ್ಮಾರ್ಟ್ ಕ್ಲಾಸ್‌ ಡೆಸ್ಟ್‌ಗಳು, ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಶುದ್ಧ ಕುಡಿಯುವ ನೀರು, 4 ಸಿಸಿ ಟಿವಿ ಕ್ಯಾಮರಾ, ಸೈರನ್ ಅಲಾರಾಂ, ಗೋಡೆಗಳ ಮೇಲೆ ಬಂದ ಚಿತ್ತಾರ. ಹೀಗೆ ಹತ್ತಾರು ಸೌಲಭ್ಯ , ವ್ಯವಸ್ಥೆಗಳಿವೆ. ಹೀಗಿದ್ದರೂ ಹೊಸ ಕಟ್ಟಡದ ಪಕ್ಕದಲ್ಲಿ ಇರುವ ಹಳೆಯ ಕಟ್ಟಡವು ಎಲ್ಲರ ಆತಂಕವಾಗಿದೆ. ಮಕ್ಕಳು ಕಟ್ಟಡದ ಅಡಲು ಹೋಗುತ್ತಾರೆ ಅವರನ್ನು ಕಾಯುವುದೆ ಶಿಕ್ಷಕರಿಗೆ ದೊಡ್ಡ ಕೆಲಸವಾಗಿದೆ‌. ಈ ಕಟ್ಟಡವನ್ನು ತೆರವುಗೊಳಿಸುವಂತೆ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಈಗಾಗಲೇ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಆಡುವ ಮಕ್ಕಳ ಪ್ರಾಣದ ಜೊತೆ ಆಟವಾಡದೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಿಸಿ ಕೂಡಲೇ ಕಟ್ಟಡ ತೆರವುಗೊಳಿಸಿ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಇದ್ದ ಆತಂಕ ದೂರ ಮಾಡಬೇಕಿದೆ...l

Edited By : Nagesh Gaonkar
Kshetra Samachara

Kshetra Samachara

07/01/2022 10:12 am

Cinque Terre

107.99 K

Cinque Terre

8

ಸಂಬಂಧಿತ ಸುದ್ದಿ