ಹುಬ್ಬಳ್ಳಿ : ಈ ಅತಿವೃಷ್ಟಿ ಆಟಕ್ಕೆ ಏನೇನು ಅವಾಂತರ ಎರ್ಪಡುತ್ತವೇ ದೇವರೇ ಬಲ್ಲ ಇದೀಗ ಶತಮಾನ ಕಂಡ ಶಾಲೆಯೊಂದು ಮಳೆ ಅವಾಂತರಕ್ಕೆ ಸಿಲುಕಿ ವಿದ್ಯಾರ್ಥಿಗಳಿಗೆ ಕೂತು ಪಾಠ ಕೇಳಲು ಸ್ಥಳವಿರದ ಪರಿಸ್ಥಿತಿಗೆ ಸಿಲುಕಿದ್ದು ಸಂಪೂರ್ಣ ಶಾಲೆ ಕೊಠಡಿ ಹಾಗೂ ಅಂಗಳದಲ್ಲಿ ನೀರು ಸಂಗ್ರಹವಾಗಿದೆ.
ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಇಂತಹ ಪರಿಸ್ಥಿತಿಗೆ ಸಿಲುಕಿದ್ದು, ಶಾಲಾ ಹಂಚುಗಳು ಸಂಪೂರ್ಣ ಒಡೆದು ಹಾಳಾದ ಪರಿಣಾಮ ಮೇಲ್ಪಾವಣಿ ಹಾಗೂ ಗೋಡೆಗಳು ಸೋರುತ್ತಿದ್ದು ಶಾಲಾ ಸಿಬ್ಬಂದಿಗಳು ನೀರು ಹೊರ ಹಾಕಿ ಸುಸ್ತಾಗಿದ್ದಾರೆ.
ನಿನ್ನೆ ರಾತ್ರಿ ಮತ್ತು ಇಂದು ಬೆಳಿಗ್ಗೆ ಸುರಿದ ಮಳೆಯ ಹೊಡೆತಕ್ಕೆ ಶಾಲೆ ಪರಿಸರ ಅವ್ಯವಸ್ಥೆ ತಲುಪಿದ್ದು, ತರಗತಿಗೆ ಬಂದ ಮಕ್ಕಳಿಗೆ ಶಾಲಾ ರಂಗ ಮಂಟಪವೇ ಆಶ್ರಯವಾಗಿದ್ದು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿದ್ದಾರೆ.
ಶಾಲೆ ಪರಿಸ್ಥಿತಿ ಬಗ್ಗೆ ಈ ಹಿಂದೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಇಂದಿಗೂ ಯಾವುದೇ ಕ್ರಮ ಕೈಗೊಳ್ಳಲ್ಲದ ಹಿನ್ನೆಲೆಯಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಈ ಬಗ್ಗೆ ಮಾನ್ಯ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರೇ ನಿಮ್ಮದೇ ಕ್ಷೇತ್ರದ ಶಾಲೆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿ.
Kshetra Samachara
02/12/2021 03:35 pm