ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
ನವಲಗುಂದ : ಎಸ್ ಸಿ ಮತ್ತು ಎಸ್ ಟಿ ವಿದ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡ ನಿರ್ಮಾಣಗೊಂಡು ಸುಮಾರು ಮೂರು ವರ್ಷಗಳೇ ಕಳೆದರು ಸಹ ಇದುವರೆಗೂ ಈ ಕಟ್ಟಡದಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ನೀಡಿಲ್ಲ. ಅದು ಯಾಕೆ, ಮತ್ತು ಯಾವಾಗ ಆರಂಭ ಆಗಬಹುದು ಅಂತೀರಾ, ಈ ವರದಿ ನೋಡಿ...
ನವಲಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಿರ್ಮಾಣಗೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯ 2018ರ ಏಪ್ರಿಲ್ ನಲ್ಲಿ ನಿರ್ಮಾಣಗೊಂಡಿದೆ. ಆದರೆ ಅದು ಇಲ್ಲಿಯವರೆಗೂ ವಿದ್ಯಾರ್ಥಿಗಳ ವಸತಿಗೆ ಲಭ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಅದು ಈ ಕಾಲೇಜಿನಲ್ಲಿರುವ ಕೊಠಡಿಗಳ ಕೊರತೆ.
ಹೌದು ಇಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ವಸತಿ ನಿಲಯವನ್ನು ಕೊಠಡಿಗಳನ್ನಾಗಿ ಬದಲಾಯಿಸಿಕೊಂಡು ತರಗತಿಗಳನ್ನು ನಡೆಸಲಾಗುತ್ತಿತ್ತು.
ಸದ್ಯ 2020 ರಲ್ಲಿ ಹೆಚ್ಚುವರಿ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೂ ಇದುವರೆಗೆ ವಸತಿ ನಿಲಯದ ಸೌಲಭ್ಯ ದೊರಕದಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಸಂಜೊತಾ ಎಸ್ ಶಿರಸಂಘಿ ಅವರು ಸಂಪೂರ್ಣ ಮಾಹಿತಿ ನೀಡಿರುವುದು ಹೀಗೆ .
Kshetra Samachara
12/11/2021 04:27 pm